ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೀನಾ ಎಚ್ಚರಿಕೆಗೆ ಡೊಂಟ್ ಕೇರ್ : ತೈವಾನ್ ಗೆ ಕಾಲಿಟ್ಟ ಅಮೆರಿಕ ಸ್ಪೀಕರ್

ಚೀನಾದ ಖಡಕ್ ಎಚ್ಚರಿಕೆಯ ನಡುವೆಯೂ ಅಮೆರಿಕ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಗೆ ಎಂಟ್ರಿಕೊಡುವ ಮೂಲಕ

ಡ್ರ್ಯಾಗನ್ ಧಮ್ಕಿಗೆ ಸೆಡ್ಡುಹೊಡೆದಿದ್ದಾರೆ.ಈ ಮೂಲಕ ಕಳೆದ 25 ವರ್ಷಗಳ ಬಳಿಕ ತೈವಾನ್ ಗೆ ಭೇಟಿ ನೀಡುತ್ತಿರುವ ಅಮೆರಿಕದ ಉನ್ನತ ಮಟ್ಟದ ಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ನ್ಯಾನ್ಸಿ ಪೆಲೋಸಿ ಅವರಿದ್ದ ಅಮೆರಿಕ ಸರಕಾರದ ವಿಶೇಷ ವಿಮಾನಕ್ಕೆ ದಾರಿಯುದ್ದಕ್ಕೂ ತೈವಾನ್ ವಾಯುಪಡೆಯ ಯುದ್ಧ ವಿಮಾನಗಳು ಬೆಂಗಾವಲಾಗಿದ್ದುದು ವಿಶೇಷವಾಗಿತ್ತು.ಕಳೆದ ವಾರವಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ತೈವಾನ್ ವಿಚಾರದಲ್ಲಿ ನೀವು ಬೆಂಕಿ ಜತೆ ಸರಸವಾಡುತ್ತಿದ್ದೀರಿ ಎಂಬ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಿಗೇ ನಡೆದ ಹೊಸ ಬೆಳವಣಿಗೆ ಅಮೆರಿಕಾ ಚೀನಾ ನಡುವೆ ಇನ್ನಷ್ಟು ಉದ್ವಿಗ್ನ ಸ್ಥಿತಿ ನಿರ್ಮಿಸಿದೆ.

ಪೆಲೋಸಿ ಭೇಟಿಯ ಸಂದರ್ಭದಲ್ಲಿಯೇ ತೈವಾನ್ ಜಲಸಂಧಿಯ ಸಮೀಪ ಚೀನಾದ ಯುದ್ಧ ವಿಮಾನಗಳೂ ಹಾರಾಟ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

Edited By : Nirmala Aralikatti
PublicNext

PublicNext

02/08/2022 10:36 pm

Cinque Terre

31.89 K

Cinque Terre

2

ಸಂಬಂಧಿತ ಸುದ್ದಿ