ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೆಟ್ಟಿಲಿನಿಂದ ಜಾರಿ ಬಿದ್ದು ಮೃತಪಟ್ಟ ಡೊನಾಲ್ಡ್ ಟ್ರಂಪ್ 2ನೇ ಪತ್ನಿ ಇವಾನಾ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್(73) ನಿಧನರಾಗಿದ್ದಾರೆ.

ನ್ಯೂಯಾರ್ಕ್ ನಗರದ ತಮ್ಮ ನಿವಾಸದಲ್ಲಿ ಮೆಟ್ಟಿಲಿನಿಂದ ಜಾರಿ ಬಿದ್ದು, ಗುರುವಾರ ಇವಾನಾ ಟ್ರಂಪ್ ಅವರು ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.

ಆಕೆ ಅದ್ಭುತ, ಸುಂದರ ಮಹಿಳೆ. ಅವಳ ಹೆಮ್ಮೆ ಮತ್ತು ಸಂತೋಷವೆಂದರೆ ಅವಳ ಮೂವರು ಮಕ್ಕಳಾದ ಡೊನಾಲ್ಡ್ ಜೂನಿಯರ್, ಇವಾಂಕಾ ಮತ್ತು ಎರಿಕ್. ಅವಳ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇತ್ತು. ಅವಳಿಗೂ ನಮ್ಮ ಬಗ್ಗೆ ತುಂಬಾ ಹೆಮ್ಮೆ ಇತ್ತು. ಅವಳು ಮಕ್ಕಳಿಗೆ ತಾಳ್ಮೆ ಮತ್ತು ಕಠಿಣತೆ, ಸಹಾನುಭೂತಿಯನ್ನು ಕಲಿಸಿಕೊಟ್ಟಿದ್ದಾಳೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

Edited By : Nagaraj Tulugeri
PublicNext

PublicNext

15/07/2022 09:42 am

Cinque Terre

47.57 K

Cinque Terre

5

ಸಂಬಂಧಿತ ಸುದ್ದಿ