ಟೋಕಿಯೋ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ನಾರಾ ಪ್ರದೇಶದಲ್ಲಿ ಭಾಷಣ ಮಾಡುತ್ತಿದ್ದಾಗಲೇ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಜಪಾನ್ ಪೊಲೀಸರು ಬಂಧಿಸಿದ್ದು, ತೀವ್ರ ತನಿಖೆ ಕೈಗೊಂಡಿದ್ದಾರೆ.
ಯಮಗಮಿ ತೆತ್ಸುಯಾ (41) ಬಂಧಿತ ಆರೋಪಿ. ಸದ್ಯ ಗುಂಡಿನದಾಳಿ ನಡೆಸಿದ್ದು ಏಕೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದು, ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಯಮಗಮಿ ತೆತ್ಸುಯಾ ತಾನೇ ತಯಾರಿಸಿದ ಬಂದೂಕಿನಿಂದಲೇ ಗುಂಡಿನ ದಾಳಿ ನಡೆಸಿರುವುದು ಬಯಲಾಗಿದೆ. ಅಲ್ಲದೇ ದಾಳಿ ನಡೆಸಿದ ಮೇಲೆಯೂ ಈತ ತಪ್ಪಿಸಿಕೊಳ್ಳಲು ಯತ್ನಿಸದೇ ಅಲ್ಲೇ ಬಂದೂಕು ಹಿಡಿದು ನಿಂತಿದ್ದ. ಆತನನ್ನು ಗಮನಿಸಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.
PublicNext
08/07/2022 04:15 pm