ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಾಣ ಪಣಕ್ಕಿಟ್ಟು 8ನೇ ಮಹಡಿ ಕಿಟಕಿಯಿಂದ ಬೀಳುತ್ತಿದ್ದ ಮಗು ರಕ್ಷಿಸಿದ ವ್ಯಕ್ತಿ

ನೂರ್​-ಸುಲ್ತಾನ್​: ವ್ಯಕ್ತಿಯೋರ್ವ ತನ್ನ ಪ್ರಾಣವನ್ನು ಪಣಕ್ಕಿಟ್ಟು 8ನೇ ಮಹಡಿಯಲ್ಲಿ ನೇತಾಡುತ್ತಿದ್ದ ಮೂರು ವರ್ಷದ ಬಾಲಕಿಯನ್ನು ರಕ್ಷಿಸಿದ್ದಾರೆ. ಈ ಘಟನೆ ಕಜಾಕಿಸ್ತಾನದ ರಾಜಧಾನಿ ನೂರ್​-ಸುಲ್ತಾನ್‌ನಲ್ಲಿ ಮೇ 11ರಂದು ನಡೆದಿದ್ದು, ಮಗುವಿನ ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಗುವಿನ ತಾಯಿ ಶಾಪಿಂಗ್‌ಗೆ ಹೋಗಿದ್ದಾಗ ಆಟವಾಡುತ್ತಾ ಬಾಲಕಿ ಕಿಟಕಿಯಿಂದ ಹೊರಬರಲು ಪ್ರಯತ್ನಿಸಿದೆ. ಇದರಿಂದಾಗಿ ಕಿಟಕಿಯ ತುದಿ ಹಿಡಿದು ನೇತಾಡುತ್ತಿದ್ದಳು. ಈ ಮಗುವಿನ ಮನೆಯ ಕೆಳ ಮಹಡಿಯಲ್ಲಿ ಶೋಂಟಾಕ್‌ಬೇವ್ ಸಾಬಿತ್ ಎಂಬ ವ್ಯಕ್ತಿ ವಾಸಿಸುತ್ತಿದ್ದಾರೆ. ಸಾಬಿತ್ ಕಚೇರಿಗೆ ತೆರಳಲು ಅಣಿಯಾಗುತ್ತಿದ್ದರು. ಈ ವೇಳೆ ಮನೆಯಿಂದ ಹೊರಗಡೆ ಸೇರಿದ್ದ ಜನರು ಕೂಗಾಡುವುದನ್ನು ಸಾಬಿತ್ ಗಮನಿಸಿ ಅಲ್ಲಿಂದಲೇ ವಿಚಾರಿಸಿದ್ದಾರೆ. ಆಗ ಅವರು ಮೇಲಿನ ಮನೆಯ ಕಿಟಕಿಯಿಂದ ಪುಟ್ಟ ಮಗುವೊಂದು ಕಿಟಕಿಯಿಂದ ಜೋತು ಬೀಳುತ್ತಿರುವುದನ್ನು ಕಂಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾಗಿ ಮಗುವಿನ ಪ್ರಾಣ ಉಳಿಸಿದ್ದಾರೆ.

ಸಾಬಿತ್ ಅವರ ಈ ಸಾಹಸಕ್ಕೆ ಕಜಾಕಿಸ್ತಾನದ ತುರ್ತು ಪರಿಸ್ಥಿತಿಗಳ ಸಚಿವಾಲಯ ಆಪತ್ಭಾಂಧವ ವ್ಯಕ್ತಿಯನ್ನು 'ಹೀರೋ' ಎಂದು ಮುಕ್ತಕಂಠದಿಂದ ಶ್ಲಾಘಿಸಿ ವಿಶೇಷ ಬ್ಯಾಡ್ಜ್​ ನೀಡಿ ಗೌರವಿಸಿದೆ.

Edited By : Vijay Kumar
PublicNext

PublicNext

16/05/2022 03:54 pm

Cinque Terre

68.62 K

Cinque Terre

7

ಸಂಬಂಧಿತ ಸುದ್ದಿ