ಕೊಲಂಬೊ: ತೀವ್ರ ಸ್ವರೂಪದ ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾ ಜನರು ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯು ಹಿಂಸಾತ್ಮಕ ರೂಪ ಪಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ 'ಸಾರ್ವಜನಿಕ ತುರ್ತು ಪರಿಸ್ಥಿತಿ' ಘೋಷಣೆ ಮಾಡಲಾಗಿದೆ. ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ನಿನ್ನೆ (ಶುಕ್ರವಾರ) ಗೆಜೆಟ್ ಹೊರಡಿಸಿ 'ತುರ್ತು ಪರಿಸ್ಥಿತಿ'ಯನ್ನ ಘೋಷಿಸಿದ್ದಾರೆ.
ನೂರಾರು ಜನರು ರಾಜಪಕ್ಸ ಅವರ ನಿವಾಸವನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿದ ಮರುದಿನವೇ ಈ ನಿರ್ಧಾರ ಕೈಗೊಳ್ಳಲಾಗಿದೆ. 'ಶ್ರೀಲಂಕಾದಲ್ಲಿ ಸಾರ್ವಜನಿಕ ತುರ್ತುಪರಿಸ್ಥಿತಿ ಇದೆ ಎಂಬುದು ನನ್ನ ನಂಬಿಕೆ. ಅದರಿಂದಾಗಿ ಕಠಿಣ ಕಾನೂನುಗಳನ್ನು ಜಾರಿ ಮಾಡಬೇಕಾಯಿತು. ಶಂಕಿತರನ್ನು ಬಂಧಿಸಲು, ವಶಕ್ಕೆ ತೆಗೆದುಕೊಳ್ಳಲು ಭದ್ರತಾ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ' ಎಂದು ರಾಜಪಕ್ಸ ಹೇಳಿದ್ದಾರೆ.
PublicNext
02/04/2022 07:37 am