ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ವಿಜಯದ ಚಿತ್ರವೊಂದು ₹ 6 ಕೋಟಿಗೆ ಮಾರಾಟ

1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಅವರ ಮಗ ಟಿಪ್ಪು ಸುಲ್ತಾನ್ ಅವರ ಐತಿಹಾಸಿಕ ವಿಜಯವನ್ನು ಬಿಮಬಿಸುವ ಚಿತ್ರವೊಂದು ಲಂಡನ್ ನಲ್ಲಿ 630,000 ಪೌಂಡ್ (₹ 6.2 ಕೋಟಿ) ಗೆ ಮಾರಾಟವಾಗಿದೆ.

ಕರ್ನಾಟಕದಲ್ಲಿ ಟಿಪ್ಪು ಪರ ಮತ್ತು ವಿರುದ್ಧದ ಚರ್ಚೆಯ ಮಧ್ಯೆದಲ್ಲಿ ಈ ಚಿತ್ರ ಭಾರೀ ಬೆಲೆಗೆ ಮಾರಾಟವಾಗುವ ಮೂಲಕ ಎಲ್ಲರ ಗಮನ ಸೆಳೆದಿದೆ. "ಇಂದಿನ ಆರ್ಟ್ಸ್ ಆಫ್ ದಿ ಇಸ್ಲಾಮಿಕ್ ವರ್ಲ್ಡ್ & ಇಂಡಿಯಾ ಹರಾಜಿನಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಚಿತ್ರ ಇದಾಗಿದೆ. ಸೆಪ್ಟಂಬರ್ 10, 1780 ರಂದು ಎರಡನೇ ಆಂಗ್ಲೋ-ಮೈಸೂರು ಯುದ್ಧದ ಭಾಗವಾಗಿ ನಡೆದ 'ಪೊಲ್ಲಿಲೂರ್ ಕದನ', ದೃಶ್ಯ" ಎಂದು ಸೋಥೆಬಿ ಟ್ವೀಟ್ ನಲ್ಲಿ ಬರೆದಿದ್ದಾರೆ.

”ಸೋಥೆಬಿಯ ತಜ್ಞ ವಿಲಿಯಂ ಡಾಲ್ರಿಂಪಲ್, ‘ದಿ ಅನಾರ್ಕಿ: ದಿ ರಿಲೆಂಟ್ಲೆಸ್ ರೈಸ್ ಆಫ್ ದಿ ಈಸ್ಟ್ ಇಂಡಿಯಾ ಕಂಪನಿ’ ಲೇಖಕ “ಟಿಪ್ಪು ಸುಲ್ತಾನ್ ಬಹುಶಃ ಈಸ್ಟ್ ಇಂಡಿಯಾ ಕಂಪನಿ ಎದುರಿಸಿದ ಅತ್ಯಂತ ಪರಿಣಾಮಕಾರಿ ಎದುರಾಳಿ. ಟಿಪ್ಪು ಭಾರತೀಯರು ಮತ್ತೆ ಹೋರಾಡಬಲ್ಲರು, ಅವರು ಗೆಲ್ಲಬಲ್ಲರು ಎಂದು ತೋರಿಸಿದರು ಭಾರತದಲ್ಲಿ ಯುರೋಪಿಯನ್ ಸೈನ್ಯವನ್ನು ಸೋಲಿಸಿದ ಮೊದಲ ಬಾರಿಗೆ ಈ ಪೊಲ್ಲಿಲೂರ್ ಕದನವಾಗಿದೆ, ”ಎಂದು ಅವರು ವಿವರಿಸಿದ್ದಾರೆ.

ಚಿತ್ರಕಲೆಯು ಸುಮಾರು 32 ಅಡಿ ಉದ್ದದ 10 ದೊಡ್ಡ ಕಾಗದದ ಹಾಳೆಗಳಲ್ಲಿ ಬಿಡಿಸಲಾಗಿದೆ.

Edited By : Nirmala Aralikatti
PublicNext

PublicNext

31/03/2022 08:03 am

Cinque Terre

35.1 K

Cinque Terre

36

ಸಂಬಂಧಿತ ಸುದ್ದಿ