ಗಡಿ ಸಂಘರ್ಷದ ಬಳಿಕ ಮೊದಲ ಸಲ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಗುರುವಾರ ಭಾರತಕ್ಕೆ ಭೇಟಿ ನೀಡಿದ್ದಾರೆ.
ಈ ವೇಳೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ವಾಂಗ್ ಯಿ ಡಿಲಿಗೇಷನ್ ಲೆವೆಲ್ ಮಾತು ಕತೆ ನಡೆಸಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇಂದು ಬೆಳಗ್ಗೆ ಸುಮಾರು 10.30 ಗಂಟೆ ಸುಮಾರಿಗೆ ವಾಂಗ್ ಯಿ ಮೊದಲ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆ ಔಪಚಾರಿಕ ಭೇಟಿ ಮಾಡಿದ್ರು. ನಂತರ ಅಜಿತ್ ದೋವಲ್-ವಾಂಗ್ ಯಿ ಭೇಟಿ ಮಾಡಿ ಸುದೀರ್ಘ ಸಭೆ ನಡೆಸಿದ್ದಾರೆ. ಈ ಸಭೆ ವೇಳೆ ಏನೆಲ್ಲಾ ಮಾತುಕತೆ ನಡೆಯಿತು ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಎರಡೂ ದೇಶಗಳ ಅಧಿಕಾರಿಗಳು ಇನ್ನೂ ನೀಡಿಲ್ಲ. ಮೂಲಗಳ ಪ್ರಕಾರ
ಚೀನಾ ವಿದೇಶಾಂಗ ಸಚಿವರ ಜೊತೆ ಸಭೆ ನಡೆಸಿದ ಅಜಿತ್ ದೋವಲ್, ಅವರಿಗೆ ಗಡಿ ಭದ್ರತೆ ಹಾಗೂ ಎರಡೂ ದೇಶಗಳ ಸಂಬಂಧ ವೃದ್ಧಿಯಾಗಬೇಕಾದ್ರೆ, ಚೀನಾ ಏನು ಮಾಡಬೇಕು ಅನ್ನೊದನ್ನ ಖಡಕ್ ಆಗಿಯೇ ಹೇಳಿದ್ದಾರೆ ಎನ್ನಲಾಗಿದೆ.
ಸಭೆಯಲ್ಲಿ ಮಾತನಾಡಿದ ಇದು
1. ಭಾರತ-ಚೀನಾ ಸಂಬಂಧ ವೃದ್ಧಿಯಾಗಬೇಕಾದ್ರೆ ಮೊದಲು ಗಡಿಯಲ್ಲಿ ಚೀನಾ ಸ್ಟೇಟಸ್ ಕೋ ಕಾಯ್ದುಕೊಳ್ಳಬೇಕು.
2. ಚೀನಾದ ಸೇನೆ ಗಡಿಯಿಂದ ಹಿಂದೆ ಸರಿಯಬೇಕು, ಅದಕ್ಕೆ ಪ್ರತಿಯಾಗಿ ಭಾರತ ಕೂಡ ತನ್ನ ಸೇನೆಯನ್ನು ಮೊದಲಿದ್ದ ಸ್ಥಳಕ್ಕೆ ವಾಪಸ್ ಕರೆಸಿಕೊಳ್ಳುತ್ತೆ
3. ಡಿ-ಎಸ್ಕೇಲೇಷನ್: ಅಂದ್ರೆ ಚೀನಾದ ಸೈನಿಕರ ಸಂಖ್ಯೆ ಹಾಗೂ ಶಸ್ತ್ರಾಸ್ತ್ರಗಳಲ್ಲೂ ಇಳಿಕೆ ಆಗಬೇಕು
4. ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ ನಲ್ಲಿ ಶಾಂತಿ ನೆಲೆಸಲು ಚೀನಾ ಮೊದಲ ಹೆಜ್ಜೆ ಇಡಬೇಕು. ಎಲ್ಲ ಒಪ್ಪಂದಗಳನ್ನು ಗೌರವಿಸಬೇಕು.
ಅಜಿತ್ ದೋವಲ್ ಮಾತಿಗೆ ಪ್ರತಿಕ್ರಿಯೇ ನೀಡಿರುವ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ, ಯಾವುದನ್ನೂ ಅಲ್ಲಗಳೆದಿಲ್ಲ. ಬದಲಿಗೆ ನಮ್ಮ ಸೇನಾ ನಾಯಕರೊಂದಿಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಅಜಿತ್ ದೋವಲ್ ರನ್ನು ಚೀನಾಕ್ಕೆ ಆಹ್ವಾನಿಸಿರುವ ವಾಂಗ್, ನಿಮಾಗಾಗಿ ಚೀನಾ ಎದುರು ನೋಡುತ್ತಿರುತ್ತದೆ ಎಂದೂ ಅವರು ಹೇಳಿದ್ದಾರೆ ಎನ್ನಲಾಗಿದೆ.
PublicNext
25/03/2022 11:03 pm