ಜಗತ್ತಿನಲ್ಲಿ ನಡೆಯುವ ಕೆಲವು ಘಟನೆಗಳು ನಮ್ಮ ಕಿವಿಗೆ ಬಿದ್ದಾಗ ಒಂದು ಕ್ಷಣ ಶಾಕ್ ಆಗುತ್ತದೆ. ಅಂತಹ ಅನೇಕ ವಿಚಾರಗಳ ಪೈಕಿ ದಂಪತಿಯೊಬ್ಬರು ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮೂಲಕ ಕೋಟಿ ಕೋಟಿ ರೂ. ಸಂಪಾದಿಸುತ್ತಿದ್ದಾರೆ. ಇದು ಅಚ್ಚರಿಯಾದರೂ ಸತ್ಯ.
ಹೌದು ಲಂಡನ್ ನಲ್ಲಿ 30 ವರ್ಷದ ಹಾಥಾರ್ನ್ ನಾಲ್ಕು ಮಕ್ಕಳನ್ನು ಹೊಂದಿದ್ದಾಳೆ. ಕಳೆದ ವರ್ಷದ ಲಾಕ್ ಡೌನ್ ಸಮಯದಲ್ಲಿ ಉದ್ಯೋಗವಿಲ್ಲದೆ ಏನು ಮಾಡುವುದು ತಿಳಿಯದ ಹಾಥಾರ್ನ್ ಎದೆ ಹಾಲು ಬಳಸಿ ದುಡಿಯಲು ಮುಂದಾಗುತ್ತಾಳೆ.ಇದಕ್ಕೆ ಆಕೆಯ ಪತಿಯೂ ಸಾಥ್ ಕೊಟ್ಟಿದ್ದಾರೆ. ಎದೆಹಾಲಿನಿಂದ ನೆಕ್ಲೇಸ್, ಉಂಗುರ, ಕಿವಿಯೋಲೆ ಮತ್ತು ಪೆಂಡೆಂಟ್ ವಿನ್ಯಾಸ ಮಾಡಿ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.
ಸಾಕಷ್ಟು ಸಂಶೋಧನೆ ಮಾಡಿ ಈ ನೆಕ್ಲೇಸ್, ಪೆಂಡೆಂಟ್ ವಿನ್ಯಾಸ ಮಾಡುತ್ತಿದ್ದೇನೆ ಎಂದು ಹಾಥಾರ್ನ್ ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ಬೇರೆ ತಾಯಂದಿರಿಂದಲೂ ಹಾಲು ಖರೀದಿಸುತ್ತಿದ್ದೇನೆ ಎಂದಿದ್ದಾರೆ. ನೆಕ್ ಪೀಸ್ ಗಾಗಿ ಹಾಥಾರ್ನ್ 10 ಮಿಲಿಲೀಟರ್ ಹಾಲಿನ ಮೂರನೇ ಒಂದು ಭಾಗವನ್ನು ಬಳಸುತ್ತಾರಂತೆ. ಎದೆ ಹಾಲನ್ನು ಕುದಿಸಿ ನಂತರ ಕೆಲವು ಪುಡಿಗಳನ್ನು ಬೆರೆಸಿ ಒಣಗಿಸುವುದರೊಂದಿಗೆ ಕೂದಲು, ಮಗುವಿನ ಹಲ್ಲು ಬಳಸಿ ವಿನ್ಯಾಸ ಮಾಡುವುದಾಗಿ ಹೇಳಿಕೊಂಡಿದ್ದಾಳೆ.
PublicNext
25/03/2022 05:54 pm