ಲಂಡನ್: ಸದ್ಗುರು ಜಗ್ಗಿ ವಾಸುದೇವ್ ಅವರು ಮಣ್ಣನ್ನು ಉಳಿಸಿ (Save Soil) ಎಂಬ ಘೋಷ ವಾಕ್ಯದೊಂದಿಗೆ ಬೈಕ್ ಅಭಿಯಾನ ಆರಂಭಿಸಿದ್ದಾರೆ.
ಮಾರ್ಚ್ 21ರಂದು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಲಂಡನ್‌ನಲ್ಲಿ ಸದ್ಗುರು ಅವರ ಬೈಕ ಅಭಿಯಾನಕ್ಕೆ ಭರ್ಜರಿ ಚಾಲನೆ ಸಿಕ್ಕಿತು. ಲಂಡನ್‌ನಲ್ಲಿ ಇರುವ ಭಾರತೀಯರು, ವಿದೇಶೀ ಭಕ್ತರು ಸಾವಿರ ಸಂಖ್ಯೆಯಲ್ಲಿ ಈ ಅಭಿಯಾನದ ಚಾಲನಾ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದರು.
ಬೈಕ್ ರೇಸ್ ಪಟುವಿನ ರೀತಿ ಕೈಗೆ ಗ್ಲೌಸ್, ಕಾಲಿಗೆ ಶೂ, ತಲೆಗೆ ಹೆಲ್ಮೆಟ್ ಧರಿಸಿದ್ದ ಸದ್ಗುರು ಜಗ್ಗಿ ವಾಸುದೇವ್, ನವ ಯುವಕನಂತೆ ಬೈಕ್ ಮೇಲೆ ಕಂಗೊಳಿಸುತ್ತಿದ್ದರು. 100 ದಿನಗಳ ಕಾಲ ಬರೋಬ್ಬರಿ 30 ಸಾವಿರ ಕಿಲೋ ಮೀಟರ್ ದೂರದ ಬೈಕ್ ಅಭಿಯಾನ ಇದಾಗಿದ್ದು, ಲಂಡನ್‌ನಿಂದ ಭಾರತದವರೆಗೆ ಸದ್ಗುರು ಅವರು ಬೈಕ್ ಚಲಾಯಿಸಲಿದ್ದಾರೆ.
PublicNext
22/03/2022 04:35 pm