ಉಕ್ರೇನ್: ನ್ಯಾಟೋ ವಿರುದ್ಧ ಉಕ್ರೇನ್ ಅಧ್ಯಕ್ಷ ತೀವ್ರ ಸಿಟ್ಟಾಗಿದ್ದಾರೆ.ನಮ್ಮನ್ನ ನ್ಯಾಟೋಗೆ ಸೇರಿಸಿಕೊಳ್ಳಿ. ಇಲ್ಲವೇ ರಷ್ಯಾ ದೇಶಕ್ಕೆ ಭಯ ಪಡುತ್ತಿದ್ದೇವೆ ಅಂತಲಾದರೂ ಹೇಳಿಕೊಂಡು ಬಿಡಿ ಅಂತಲೇ ಝಲೆನ್ಸ್ಕಿ ಈಗ ಓಪನ್ ಆಗಿಯೇ ಹೇಳಿ ಬಿಟ್ಟಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಮಿಡಿರ್ ಝಲೆನ್ಸ್ಕಿ ನ್ಯಾಟೋವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಉಕ್ರೇನ್ ದೇಶವನ್ನ ನ್ಯಾಟೋ ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲವೇ ರಷ್ಯಾ ದೇಶಕ್ಕೆ ಹೆದರುತ್ತಿದೇವೆ ಅಂತ ಹೇಳಿಕೊಳ್ಳಬೇಕು. ಇದನ್ನ ಹೇಳಲಿಕ್ಕೆ ಈಗ ಸೂಕ್ತ ಸಮಯ ಬಂದಿದೆ ಅಂತಲೇ ಝಲೆನ್ಸ್ಕಿ ಟೀಕಿಸಿದ್ದಾರೆ.
ಒಂದು ವೇಳೆ ನಮ್ಮ ದೇಶ ನ್ಯಾಟೋ ಸದಸ್ಯ ಆಗಿದ್ದರೇ ರಷ್ಯಾ ದೇಶ ನಮ್ಮ ದೇಶದ ಮೇಲೆ ದಾಳಿ ಮಾಡುತ್ತಿರಲಿಲ್ಲ ಎಂದೇ ಈ ಹಿಂದೇನೆ ಝಲೆನ್ಸ್ಕಿ ಹೇಳಿದ್ದರು.
PublicNext
22/03/2022 09:57 am