ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕಿಸ್ತಾನದ ಸಿಯಾಲ್‌ಕೋಟ್‌ ಸೇನಾ ನೆಲೆಯಲ್ಲಿ ಭಾರೀ ಸ್ಫೋಟ

ಇಸ್ಲಾಮಾಬಾದ್: ಪಾಕಿಸ್ತಾನದ ಸಿಯಾಲ್‌ಕೋಟ್‌ ನಗರದಲ್ಲಿರುವ ಸೇನಾ ನೆಲೆಯಲ್ಲಿ ಭಾನುವಾರ ಭಾರೀ ಪ್ರಮಾಣದ ಸ್ಫೋಟ ಸಂಭವಿಸಿದೆ. ಪಂಜಾಬ್‌ ಪ್ರಾಂತ್ಯದ ಕಂಟೋನ್ಮೆಂಟ್ ವಲಯದಲ್ಲಿ ಹಲವು ಬಾರಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಈ ಸಂಬಂಧ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಸ್ತ್ರಾಸ್ತ್ರಗಳು, ಮದ್ದು–ಗುಂಡುಗಳ ಸಂಗ್ರಹಾಗಾರದಲ್ಲಿ ಸ್ಫೋಟ ಸಂಭವಿಸಿರಬಹುದು ಎಂದು ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ. ಸಿಯಾಲ್‌ಕೋಟ್‌ ಸೇನಾ ನೆಲೆಯಲ್ಲಿ ಹಲವು ಸಲ ಸ್ಫೋಟ ಸಂಭವಿಸಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Edited By : Vijay Kumar
PublicNext

PublicNext

20/03/2022 01:47 pm

Cinque Terre

67.93 K

Cinque Terre

16

ಸಂಬಂಧಿತ ಸುದ್ದಿ