ಕೀವ್: ರಷ್ಯಾ-ಉಕ್ರೇನ್ ನಡುವಿನ ಯುದ್ಧ ಅದೆಷ್ಟೋ ಅಮಾಯಕರನ್ನು ಬಲಿ ಪಡೆದುಕೊಂಡಿದೆ. ಭಾರಿ ಪ್ರಮಾಣದ ಸಾವು ನೋವು ಸಂಭವಿಸಿದರೂ ಯುದ್ಧ ನಿಲ್ಲುವಂತೆ ಕಾಣುತ್ತಿಲ್ಲ. ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ನ 12 ಮಕ್ಕಳ ತಾಯಿ ಸಾವನ್ನಪ್ಪಿದ್ದಾರೆ.
48 ವರ್ಷ ವಯಸ್ಸಿನ ಓಲ್ಗಾ ಸೆಮಿಡಿಯಾನೋವಾ ಮೃತ ಮಹಿಳೆ. ಓಲ್ಗಾ ಅವರು ಉಕ್ರೇನ್ ಸೇನೆಯ ವೈದ್ಯಯಾಗಿದ್ದು, ಯುದ್ಧದ ಮುಂಚೂಣಿ ವಹಿಸಿದ್ದ ಅವರು ರಷ್ಯಾದ ಸಶಸ್ತ್ರ ಪಡೆಯಿಂದ ಕೊಲ್ಲಲ್ಪಟ್ಟಿದ್ದಾರೆ. ಓಲ್ಗಾ ಡೊನೆಟ್ಸ್ಕ್ ಪ್ರದೇಶದಲ್ಲಿ 2014ರಿಂದ ಮಿಲಿಟರಿ ವೈದ್ಯರಾಗಿದ್ದರು.
"ಓಲ್ಗಾ ಸೆಮಿಡಿಯಾನೋವಾ ಅವರು ಆರು ಮಕ್ಕಳಿಗೆ ಜನ್ಮ ನೀಡಿದ್ದರು. ಇನ್ನು ಆರು ಮಕ್ಕಳನ್ನು ದತ್ತು ಪಡೆದು ಪೋಷಣೆ ಮಾಡುತ್ತಿದ್ದರು" ಎಂದು ಉಕ್ರೇನ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
PublicNext
17/03/2022 07:11 pm