ಉಕ್ರೇನ್: ರಷ್ಯಾ ದೇಶ ಉಕ್ರೇನ್ ದೇಶವನ್ನ ನಲುಗುವಂತೆ ಮಾಡಿದೆ. ಪ್ರತಿ 30 ನಿಮಿಷಕ್ಕೊಮ್ಮೆ ದಾಳಿ ಮಾಡಿದೆ. ಇದರಿಂದ ಇಲ್ಲಿಯ ಜನ ಜೀವನ ನಿಜಕ್ಕೂ ದುಸ್ತರವಾಗಿದೆ.
ರಷ್ಯಾ ದಾಳಿಯ ಅಟ್ಟಹಾಸವನ್ನ ಉಕ್ರೇನ್‌ನ ಅಧಿಕಾರಿ ಒಬ್ಬರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆಕ್ರೋಶವನ್ನೂ ವ್ಯಕ್ತಪಡಿಸಿದ್ದಾರೆ.
ಉಕ್ರೇನ್ ದೇಶದ ಮಾರಿಯುಪೋಲ್‌ನಲ್ಲಿ ಇನ್ನೂ ಸಾಕಷ್ಟು ಜನ ಉಳಿದುಕೊಂಡಿದ್ದಾರೆ. ಇಲ್ಲಿನ ಮೇಯರ್ ವಾಡಿಮ್ ಬಾಯ್ಚಂಕೋ ಕೂಡ ಸಿಟ್ಟಿಗೆದ್ದಿದ್ದಾರೆ. ರಷ್ಯಾ ದೇಶ ನಿಜಕ್ಕೂ ಕೆಟ್ಟ ಕೆಲಸ ಮಾಡುತ್ತಿದೆ. ಇಲ್ಲಿನ ಅಪಾರ್ಟ್ಮೆಂಟ್ ಮೇಲೇನೆ ದಾಳಿ ಮಾಡುತ್ತಿದೆ. ಇದು ಉದ್ದೇಶಪೂರ್ವಕವಾಗಿಯೇ ನಡೆದ ನಿರ್ದಯಿ ಕೆಲಸ ಅಂತಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
12/03/2022 07:47 am