ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವದೆಹಲಿ: ಈ ವೀಡಿಯೋ ನೋಡಿದ್ರೆ ಕಣ್ಣೀರು ಬರುತ್ತೆ: ಎಲ್ಲಿ ಹೋಯಿತು ಮಾನವೀಯತೆ?

ರಷ್ಯಾ ಮತ್ತು ಉಕ್ರೇನ್ ದೇಶಗಳ ಮಧ್ಯೆ ಯುದ್ಧ ನಡೆಯುತ್ತಿರುವ ವಿಚಾರ ಈಗ ಜಗತ್ತಿಗೇ ತಿಳಿದಿದೆ. ಆದರೆ, ಈ ಯುದ್ಧದಲ್ಲಿ ಅದೆಷ್ಟೋ ಉಕ್ರೇನ್ ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಅನೇಕ ಮಕ್ಕಳು ಹೆತ್ತವರನ್ನು ಕಳೆದುಕೊಂಡು ಅನಾಥವಾಗಿದ್ದಾರೆ. ಹೀಗೇ ಯುದ್ಧದಲ್ಲಿ ತನ್ನ ತಂದೆ ತಾಯಿಯನ್ನು ಕಳೆದುಕೊಂಡ ಪುಟಾಣಿ ಬಾಲಕನೊಬ್ಬ ದಿಕ್ಕು ತೋಚದೇ ಒಬ್ಬಂಟಿಯಾಗಿ ಅಳುತ್ತಲೇ ಉಕ್ರೇನ್ ದೇಶ ತೊರೆಯುತ್ತಿರುವ ವೀಡಿಯೋವೊಂದು ಇದೀಗ ವೈರಲ್ ಆಗಿದೆ. ಆ ಪುಟ್ಟ ಬಾಲಕನ ವೀಡಿಯೋ ನೋಡಿದರೆ ಎಂತಹ ಕಟುಕನ ಕಣ್ಣುಗಳೂ ಒದ್ದೆಯಾಗದೆ ಇರಲಾರವು. ಇದನ್ನು ನೋಡಿದರೆ ಎಲ್ಲಿ ಹೋಯಿತು ಮಾನವೀಯತೆ ಎನ್ನುವಂತಾಗಿದೆ.

11 ವರ್ಷದ ಬಾಲಕನೋರ್ವ ಏಕಾಂಗಿಯಾಗಿ 1000 ಸಾವಿರ ಕಿಲೋ ಮೀಟರ್‌ ಪ್ರಯಾಣಿಸಿ ಸ್ಲೊವಾಕಿಯಾ ದೇಶವನ್ನು ತಲುಪಿದ ವಿಚಾರವನ್ನು ನೀವು ಈಗಾಗಲೇ ಕೇಳಿರಬಹುದು. ಬಹುಶಃ ಇಲ್ಲಿ ನೀವು ನೋಡುತ್ತಿರುವ ಬಾಲಕನಿಗೂ ಅಷ್ಟೇ ವಯಸ್ಸಿರಬಹುದು ಅಥವಾ ಅದಕ್ಕಿಂತ ಕಡಿಮೆ ಇರಬಹುದು. ಈ ಪುಟ್ಟ ಬಾಲಕ ಏಕಾಂಗಿಯಾಗಿ ಕೈಯಲ್ಲಿ ಬ್ಯಾಗ್‌ ಹಿಡಿದುಕೊಂಡು ರಸ್ತೆಯಲ್ಲಿ ಅಳುತ್ತಾ ಸಾಗುತ್ತಿದ್ದಾನೆ. ಈ ದೃಶ್ಯ ನೋಡುಗರ ಹೃದಯವನ್ನು ವೇದನೆಯಿಂದ ಮರುಗುವಂತೆ ಮಾಡುತ್ತಿದೆ.

ರಷ್ಯಾ ನಡೆಸಿದ ದಾಳಿಯಿಂದ ತನ್ನ ಹೆತ್ತವರನ್ನು ಕಳೆದುಕೊಂಡಿರುವ ಈ ಬಾಲಕ ಏಕಾಂಗಿಯಾಗಿ ದೇಶ ತೊರೆಯುತ್ತಿದ್ದಾನೆ. ರಸ್ತೆ ಮಧ್ಯೆ ಅಳುತ್ತ ಯಾರು ಎಲ್ಲಿಗೆ ಹೊರಟಿದ್ದಾರೋ ಅವರನ್ನು ಹಿಂಬಾಲಿಸುತ್ತಿದ್ದಾನೆ. ದೇಶ ದೇಶಗಳ ಮಧ್ಯೆ ಸಮಸ್ಯೆ ಏನೇ ಇರಲಿ. ಯುದ್ಧಗಳಿಂದಾಗುವ ಸಮಸ್ಯೆಗಳಿಗೆ ಇದೊಂದು ವೀಡಿಯೋ ಸಾಕು ಎನಿಸುತ್ತದೆ.

Edited By :
PublicNext

PublicNext

09/03/2022 10:18 am

Cinque Terre

131.73 K

Cinque Terre

20

ಸಂಬಂಧಿತ ಸುದ್ದಿ