ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾವ ಖುಷಿಗೆ ಯಾರ ಖುಷಿಗೆ ಈ ಯುದ್ಧ ?

ಉಕ್ರೇನ್: ರಷ್ಯಾ ಮತ್ತು ಉಕ್ರೇನ್ ದೇಶದ ಯುದ್ಧ ಇಂದಿಗೆ 13 ನೇ ದಿನಕ್ಕೆ ಕಾಲಿಟ್ಟಿದೆ. ಉಭಯ ದೇಶಗಳ ಶಾಂತಿ ಮಾತುಕತೆ ನಡುವೆಯೂ ಯುದ್ಧ ಟ್ಯಾಂಕರ್ ಗಳು, ಫೈಟರ್ ಜೆಟ್‌ ಗಳು ಅಬ್ಬರ ಮುಂದುವರೆಸಿವೆ.

ಈ ಯುದ್ಧದಿಂದ ಒಳ್ಳೆಯದು ಏನೂ ಆಗುತ್ತಿಲ್ಲ. ಪ್ರಾಣ ಹಾನಿ ಮತ್ತು ಇಡೀ ದೇಶ ಸರ್ವನಾಶ ಆಗುತ್ತಿದೆ. ಒಂದೇ ವಾರದಲ್ಲಿ ರಷ್ಯಾದ ಮೇಜರ್ ಜನರಲ್ ಸತ್ತು ಹೋದ್ರೆ,ಮಕ್ಕಳು ಕೂಡ ಈ ಯುದ್ಧದಲ್ಲಿ ಬಲಿಯಾಗಿದ್ದಾರೆ. ಅಮಾಯಕ 21 ಜನ ಈ ಯುದ್ಧಕ್ಕೆ ಬಲಿಯಾಗಿದ್ದಾರೆ

ಉಕ್ರೇನ್ ದೇಶದಲ್ಲಿ ಸಾಲು ಸಾಲು ಸಮಾಧಿಗಳ ಕರಾಳತೆ ಕಾಣುತ್ತಿದೆ. ಯುದ್ಧದ ಆ ಕರಾಳ ಮುಖ ಎಲ್ಲರ ಕಣ್ಮುಂದೆ ಬಂದು ನಿಲ್ಲುತ್ತಿದೆ. ಆದರೂ ಉಕ್ರೇನ್ ಮತ್ತು ರಷ್ಯಾ ಯುದ್ಧ ನಿಲ್ತಾನೇ ಇಲ್ಲ.

Edited By :
PublicNext

PublicNext

09/03/2022 07:16 am

Cinque Terre

51.25 K

Cinque Terre

1