ಕೀವ್: ರಷ್ಯಾದೊಂದಿಗಿನ ಯುದ್ಧದ ನಡುವೆ ಉಕ್ರೇನ್ ಸೈನಿಕನೋರ್ವ ತನ್ನ ಗೆಳತಿಯನ್ನು ಚೆಕ್‌ಪಾಯಿಂಟ್‌ನಲ್ಲಿ ನಿಲ್ಲಿಸಿ ನಂತರ ಆಕೆಗೆ ಪ್ರಪೋಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾರಿನಲ್ಲಿ ಹೊರಟಿದ್ದ ಜನರನ್ನು ತಡೆದ ಸೈನಿಕರು ಅವರನ್ನು ಹೊರಗೆ ಬರುವಂತೆ ಆದೇಶ ನೀಡುತ್ತಾರೆ. ಬಳಿಕ ಕಾರಿನ ಛಾವಣಿಯ ಮೇಲೆ ಕೈ ಇಟ್ಟು ಶರಣಾಗುವಂತೆ ಮಾಡುತ್ತಾರೆ. ಆಗ ಜನರ ಗುಂಪನ್ನು ಸೈನಿಕರು ಪ್ರಶ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಮಧ್ಯೆ ಸೈನಿಕನೋರ್ವ ಮೊಣಕಾಲೂರಿ ಗೆಳತಿಗೆ ಪ್ರೀತಿಯ ಪ್ರಸ್ತಾಪ ತಿಳಿಸುತ್ತಾನೆ. ಈ ವೇಳೆ ತಿರುಗಿ ನೋಡಿದ ಯುವತಿಯು ಸೈನಿಕ (ಗೆಳೆಯ) ಉಂಗುರ ಹಿಡಿದು ಕುಳಿತಿದ್ದನ್ನು ಕಂಡು ಕೆಲ ಕಾಲ ಆಶ್ಚರ್ಯಗೊಳ್ಳುತ್ತಾಳೆ. ಈ ಅವಿಸ್ಮರಣೀಯ ಕ್ಷಣದ ದೃಶ್ಯವನ್ನು ಸ್ಥಳದಲ್ಲಿದ್ದ ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
PublicNext
08/03/2022 10:30 am