ಉಕ್ರೇನ್ ದೇಶದ ಕೀವ್ ನಗರದಲ್ಲಿ ಭುಜಕ್ಕೆ ಗುಂಡೇಟು ತಿಂದು ಆಸ್ಪತ್ರೆಯೆಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಭಾರತದ ವಿದ್ಯಾರ್ಥಿ ಹರ್ಜೋತ್ ಸಿಂಗ್ ಕೊನೆಗೂ ಭಾರತಕ್ಕೆ ಬರುತ್ತಿದ್ದಾರೆ.
ಹರ್ಜೋತ್ ಸಿಂಗ್ ರನ್ನ ಕೇಂದ್ರ ಸರ್ಕಾರದ ಗಂಗಾ ಯೋಜನೆಯಡಿಯಲ್ಲಿಯೇ ಭಾರತಕ್ಕೆ ಕರೆತಲಾಗುತ್ತಿದೆ. ಇಂದು ಸಂಜೆ 7 ಗಂಟೆ ಹೊತ್ತಿಗೆ ಹರ್ಜೋತ್ ಸಿಂಗ್ ಸೇರಿದಂತೆ 200 ವಿದ್ಯಾರ್ಥಿಗಳಿರೋ ವಿಮಾನವು ದೆಹಲಿ ಬಳಿಯ ಹಿಂಡನ್ ಏರ್ ಬೇಸ್‌ಗೆ ಬಂದಿಳಿಯಲಿದೆ.
ಆಸ್ಪತ್ರೆಯ ಬೆಡ್ ಮೇಲೆ ಮಲಗಿಕೊಂಡೇ ತನ್ನ ನೋವನ್ನ ವಿದ್ಯಾರ್ಥಿ ಹರ್ಜೋತ್ ಸಿಂಗ್ ಹೇಳಿದ್ದರು.
PublicNext
07/03/2022 10:32 am