ಉಕ್ರೇನ್: ರಷ್ಯಾ ಮತ್ತು ಉಕ್ರೇನ್ ದೇಶದ ನಡುವಿನ ಯುದ್ಧ ಸಾವು-ನೋವುಗಳಿಗೆ ಸಾಕ್ಷಿ ಆಗಿದೆ. ಇದರ ಮಧ್ಯನೇ ಉಕ್ರೇನ್ ದೇಶ ಈಗೊಂದು ಶಾಕಿಂಗ್ ಹೇಳಿಕೆ ಕೊಟ್ಟಿದೆ. ಬಲಿಷ್ಟ ರಷ್ಯಾದ 10 ಸಾವಿರ ಸೈನಿಕರನ್ನ ನಾವು ಕೊಂದು ಮುಗಿಸಿದ್ದೇವೆ ಅಂತಲೇ ಉಕ್ರೇನ್ ಈಗ ಬೀಗುತ್ತಿದೆ.
ರಷ್ಯಾ ಅದೆಷ್ಟು ಬಲಿಷ್ಟ ಅಂತ ಎಲ್ಲರಿಗೂ ಗೊತ್ತಿದೆ. ಉಕ್ರೇನ್ ಕೂಡ ಇದರ ವಿರುದ್ಧ ಸೆಣಸಾಡುತ್ತಿದೆ. ಆದರೆ ಈಗ ಉಕ್ರೇನ್ ಹೇಳಿಕೆ ಎಲ್ಲರ ಗಮನ ಸೆಳೆದಿದೆ. ರಷ್ಯಾದ 10 ಸಾವಿರ ಸೈನಿಕರನ್ನ ನಾವು ಹೊಡೆದುರುಳಿಸಿದ್ದೇವೆ ಅಂತಲೇ ಉಕ್ರೇನ್ ಹೇಳಿಕೊಂಡಿದೆ.
ಉಕ್ರೇನ್ ದೇಶದ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಈಗಾಗಲೇ ರಷ್ಯಾ ದೇಶದ ಅಧ್ಯಕ್ಷ ಪುಟಿನ್ ಗೆ ಸವಾಲ್ ಹಾಕಿದ್ದಾರೆ. ನೀವು ಯುದ್ಧವನ್ನ ಗೆಲ್ಲೋಕೆ ಸಾಧ್ಯವಿಲ್ಲ. ಸುಮ್ನೆ ಉಕ್ರೇನ್ ಅನ್ನ ಒಂಟಿಯಾಗಿರು ಬಿಟ್ಟು ಬಿಡಿ ಅಂತಲೇ ಎಚ್ಚರಿಕೆ ನೀಡಿದ್ದಾರೆ.
PublicNext
06/03/2022 11:31 am