ಮಾಸ್ಕೋ: ನಾಗರಿಕರಿಗೆ ಮಾನವೀಯ ಕಾರಿಡಾರ್‌ಗಳನ್ನು ತೆರೆಯುವ ಉದ್ದೇಶದಿಂದ ರಷ್ಯಾವು ಕದನ ವಿರಾಮವನ್ನು ಘೋಷಿಸಿವೆ.
ಈ ಸಂಬಂಧ ರಷ್ಯಾದ ಮಾಧ್ಯಮ ಔಟ್ಲೆಟ್ ಸ್ಪುಟ್ನಿಕ್ ವರದಿ ಮಾಡಿದೆ. ಗ್ರೀನ್ವಿಚ್ ಮೀನ್ ಟೈಮ್ ಸಮಯ 6 ಗಂಟೆ (ಕೈವ್ ಸಮಯ ಬೆಳಗ್ಗೆ 8 ಗಂಟೆ, ದೆಹಲಿ ಸಮಯ ಬೆಳಿಗ್ಗೆ 11:30 ಗಂಟೆ, ಮಾಸ್ಕೋ ಸಮಯ ಬೆಳಗ್ಗೆ 10 ಗಂಟೆ)ಗೆ ಕದನ ವಿರಾಮ ಘೋಷಿಸುವುದಾಗಿ ರಷ್ಯಾ ತಿಳಿಸಿದೆ. ವರದಿಗಳ ಪ್ರಕಾರ ಉಕ್ರೇನ್‌ನ ಮರಿಯುಪೋಲ್, ವೊಲ್ನೋವಾಖಾ ನಿವಾಸಿಗಳಿಗೆ ಮಾನವೀಯ ಕಾರಿಡಾರ್‌ಗಳನ್ನು ತೆರೆಯಲಾಗುವುದು. ಉಕ್ರೇನ್ ಮೇಲೆ ದಾಳಿ ಮಾಡಿ, ಪ್ರಮುಖ ನಗರಗಳನ್ನು ವಶಪಡಿಸಿಕೊಂಡು ರಾಜಧಾನಿ ಕೀವ್ ನಗರಕ್ಕೆ ಮುತ್ತಿಗೆ ಹಾಕಿರುವ ರಷ್ಯಾ ಸೇನೆ ಇಂದು ಮುಂಜಾನೆ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ.
PublicNext
05/03/2022 01:08 pm