ಬೆಂಗಳೂರು: ಎಷ್ಟು ಸಾಧ್ಯವೋ ಅಷ್ಟು ಬೇಗ ಎಲ್ಲಾ ಭಾರತೀಯ ಪ್ರಜೆಗಳು ಹಾಗೂ ವಿದ್ಯಾರ್ಥಿಗಳು ಉಕ್ರೇನ್‌ನ ಕಾರ್ಕಿವ್ ನಗರ ತೊರೆಯುವಂತೆ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.
ಈ ಆದೇಶ Pesochin, Babaye, Bezlyudovka ನಗರಗಳಿಗೂ ಅನ್ವಯವಾಗುತ್ತದೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಲಾಗಿದೆ. 'ಯಾವುದೇ ರೀತಿಯ ಪರಿಸ್ಥಿತಿ ಮತ್ತು ಪರಿಣಾಮಗಳಿದ್ದರೂ 18 ಗಂಟೆಗಳೊಳಗೆ ನೀವು ಕಾರ್ಕಿವ್ ಮತ್ತು ಇತರೆ ಮೂರು ಪಟ್ಟಣಗಳನ್ನು ತೆರೆಯಬೇಕಿದೆ ಎಂದು ಉಕ್ರೇನ್‌ನ ರಾಯಭಾರಿ ಕಚೇರಿಯ ಟ್ವೀಟ್ ಸ್ಪಷ್ಟಪಡಿಸಿದೆ. ಇನ್ನೆರಡು ದಿನಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿಗಳನ್ನು ತೀವ್ರಗೊಳಿಸಲಿದೆ ಎಂಬ ಮುನ್ಸೂಚನೆಯನ್ನು ಈ ಟ್ವೀಟ್ ದೃಢೀಕರಿಸಿದೆ ಎನ್ನಬಹುದು. ಆದಷ್ಟು ಬೇಗ ಉಕ್ರೇನ್‌ನಲ್ಲಿ ಸಿಲುಕಿರುವ ಎಲ್ಲಾ ಭಾರತೀಯರು ತಾಯ್ನಾಡು ಸೇರಿಕೊಳ್ಳುವುದು ಸೂಕ್ತ ಎನ್ನುವುದು ಇದರಿಂದ ತಿಳಿಯುತ್ತಿದೆ.
PublicNext
02/03/2022 05:33 pm