ಉಕ್ರೇನ್ ನಲ್ಲಿ ಯುದ್ಧ ಕ್ರೌರ್ಯತೆ ಹೆಚ್ಚಾಗುತ್ತಿದ್ದಂತೆ ಭಾರತೀಯರು ಮತ್ತು ಇತರ ದೇಶಗಳ ಪ್ರಜೆಗಳು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಬಂಕರ್, ಬೇಸ್ ಮೆಂಟ್ ಗಳಲ್ಲಿ ಆಶ್ರಯ ಪಡೆದಿದ್ದಾರೆ. ನಿನ್ನೆ ಖಾರ್ಕೀವ್ ನಲ್ಲಿ ಭಾರತದ ವಿದ್ಯಾರ್ಥಿ ನವೀನ್ ರಷ್ಯಾ ದಾಳಿಯಿಂದ ಮೃತಪಟ್ಟ ನಂತರ ಭಾರತ ಸೇರಿ ಇನ್ನಿತರ ಕೆಲವು ದೇಶಗಳ ವಿದ್ಯಾರ್ಥಿಗಳು, ಉದ್ಯೋಗಿಗಳೆಲ್ಲ ಇಂದು ಖಾರ್ಕೀವ್ನಿಂದ ನಡೆದುಕೊಂಡೇ ಸಮೀಪದ ರೈಲ್ವೆ ಸ್ಟೇಶನ್ ಗೆ ಹೊರಟಿದ್ದಾರೆ.
ಭಾರತ 700 ಮಂದಿ ಸೇರಿ ಸುಮಾರು 1000 ಜನರು, ಆದದ್ದು ಆಗಲಿ, ದೇವರಿದ್ದಾನೆ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕೈಯಲ್ಲಿ ಭಾರತದ ಧ್ವಜ ಹಿಡಿದು, ತಮ್ಮ ಬಂಕರ್ ನಿಂದ ಏಳು ಕಿಲೋಮೀಟರ್ ದೂರದಲ್ಲಿರುವ ರೈಲ್ವೆ ಸ್ಟೇಶನ್ ಗೆ ಕಾಲ್ನಡಿ ಆರಂಭಿಸಿದ್ದಾರೆ.ಇದರಲ್ಲಿ ಕರ್ನಾಟಕದ ಹಲವು ವಿದ್ಯಾರ್ಥಿಗಳೂ ಸೇರಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
PublicNext
02/03/2022 03:45 pm