ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳಿದ್ದ ಕನ್ನಡಿಗ ಹಾವೇರಿ ಜಿಲ್ಲೆಯ ನವೀನ್ ಗ್ಯಾನಗೌಡ್ರ ರಷ್ಯಾ ದಾಳಿಗೆ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಮಗ ಓದಿ ವೈದ್ಯನಾಗಿ ನಮ್ಮ ಬಾಳು ಬೆಳಗಿಸುವನು ಎಂದುಕೊಂಡಿದ್ದ ಹೆತ್ತವರಿಗೆ ಮನೆಯ ನಂದಾ ದೀಪ ನಂದಿತಲ್ಲಾ ಎನ್ನುವ ಸುದ್ದಿ ಬರಸಿಡಿಲು ಬಂದಿದಂತ್ತಾಗಿದೆ.
ಇನ್ನು ನವೀನ ಕೊನೆಯ ಬಾರಿಗೆ ವಿಡಿಯೋ ಕಾಲ್ ಮಾಡಿ ಮನೆಯವರೊಂದಿಗೆ ಮಾತನಾಡಿದ ವಿಡಿಯೋ ವೈರಲ್ ಆಗಿದ್ದು ಹುಷಾರು ಮಗನೆ ನೀನಿರುವ ಸ್ಥಳದಿಂದ ಭಾರತದ ಧ್ವಜ ಹಾರಿಸಿ ನೀವು ಭಾರತೀಯರು ಎಂದು ನಿಮ್ಮ ರಕ್ಷಣೆಗೆ ಬರುತ್ತಾರೆ. ಆಗಾಗ ಫೋನ್ ಮಾಡುತ್ತಿರು ನಮಗೆ ನಿನ್ನದೆ ಚಿಂತೆ ಹುಷಾರಪ್ಪಾ ಎಂದಿದ್ದ ಮಾತೆ ಕೊನೆ ಎನ್ನುವುದು ಹೆತ್ತ ಒಡಲಿಗೆ ಎಷ್ಟೊಂದು ನೋವಾಗಿರಬಾರದು ಅಲ್ವೇ…
PublicNext
02/03/2022 11:23 am