ಕೀವ್: ಉಕ್ರೇನ್‌ನ ವ್ಯಕ್ತಿಯೊಬ್ಬ ಸಿಗರೇಟ್ ಸೇದುತ್ತಲೇ ಬರಿಗೈಯಲ್ಲಿ ನೆಲಬಾಂಬ್ ಹಿಡಿದು ಚಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಷ್ಯಾ ದಾಳಿಯಿಂದಾಗಿ ಉಕ್ರೇನ್ ತತ್ತರಿಸಿ ಹೋಗಿದ್ದು, ಅಲ್ಲಿನ ಜನರು ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಉಕ್ರೇನ್‌ನ ವ್ಯಕ್ತಿಯೊಬ್ಬರು ರಷ್ಯಾದವರು ಬಿಸಾಡಿದ್ದ ನೆಲಬಾಂಬ್ ಅನ್ನು ರಸ್ತೆಯಿಂದ ತೆಗೆದು ಅದನ್ನು ಪಕ್ಕದಲ್ಲಿದ್ದ ಗದ್ದೆಯೊಂದಕ್ಕೆ ಎಸೆದು ಏನೂ ಆಗೇ ಇಲ್ಲವೇನೋ ಎಂಬಂತೆ ನಡೆದುಕೊಂಡು ಹೋಗುತ್ತಾನೆ. ಈ ನೆಲಬಾಂಬ್ ಸ್ಫೋಟಗೊಂಡರೆ ಸಾಕಷ್ಟು ದೊಡ್ಡ ಶಬ್ದ ಮಾಡಬಹುದು, ಅನೇಕ ಹಾನಿಯನ್ನು ಕೂಡ ಮಾಡಬಹುದು. ಆದರೂ ಆ ವ್ಯಕ್ತಿಯ ವರ್ತನೆ ಕುತೂಹಲ ಮೂಡಿಸಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
PublicNext
28/02/2022 08:53 pm