ಕೀವ್: ಉಕ್ರೇನ್ ವಿರುದ್ಧ ಯುದ್ಧ ಘೋಷಣೆಗೆ ವಿಶ್ವದ ಅನೇಕ ದೇಶಗಳು ವಿರೋಧ ವ್ಯಕ್ತವಾಗುತ್ತಿದ್ದಂತೆ ರಷ್ಯಾ, ಉಕ್ರೇನ್ ಜೊತೆ ಸಂಧಾನಕ್ಕೆ ಆಹ್ವಾನ ನೀಡಿತ್ತು. ಆರಂಭದಲ್ಲಿ ರಷ್ಯಾ ಆಹ್ವಾನವನ್ನು ತಿರಸ್ಕರಿಸಿದ್ದ ಉಕ್ರೇನ್ ಸದ್ಯ ಮಾತುಕತೆ ನಡೆಸಲು ಸಮ್ಮತಿ ಸೂಚಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬೆಲಾರಸ್‌ನಲ್ಲಿ ಸಂಧಾನಕ್ಕೆ ರಷ್ಯಾ, ಉಕ್ರೇನ್‌ಗೆ ಆಹ್ವಾನ ನೀಡಿತ್ತು. ಆದರೆ ಈ ಆಹ್ವಾನವನ್ನು ಉಕ್ರೇನ್ ತಿರಸ್ಕರಿಸಿತ್ತು. 'ನಾವು ಬೆಲಾರಸ್‌ನಲ್ಲಿ ಸಂಧಾನ ನಡೆಯಲು ಒಪ್ಪುವುದಿಲ್ಲ' ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದರು. ಈಗ ಬೆಲಾರಸ್ ಅಥವಾ ಮಾಸ್ಕೋದಲ್ಲಿ ಮಾತುಕತೆ ನಡೆಸಲು ನಾವು ಸಿದ್ಧ ಎಂದು ಉಕ್ರೇನ್ ತಿಳಿಸಿದೆ ಎನ್ನಲಾಗಿದೆ.
PublicNext
27/02/2022 09:19 pm