ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಷ್ಯಾ ವಿರುದ್ಧದ ಖಂಡನಾ ನಿರ್ಣಯದ ಮತದಾನ : ‘ರಷ್ಯಾ ವಿರುದ್ಧ ಸೋಲು ಕಂಡ ನಿರ್ಣಯ '

ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದು, ರಷ್ಯಾದ ಆಕ್ರಮಣಾಕಾರಿ ನೀತಿಯನ್ನು ಖಂಡಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿದ್ದ ನಿರ್ಣಯದಲ್ಲಿ ಮತ ಚಲಾಯಿಸುವುದರಿಂದ ಭಾರತ ದೂರ ಉಳಿದಿದೆ.

ಭದ್ರತಾ ಮಂಡಳಿಯ ಒಟ್ಟು ಸದಸ್ಯ ರಾಷ್ಟ್ರಗಳ ಸಂಖ್ಯೆ 15 (ಖಾಯಂ 5 ರಾಷ್ಟ್ರಗಳು + ಖಾಯಂ ಅಲ್ಲದ 10 ರಾಷ್ಟ್ರಗಳು) ಅಮೆರಿಕಾ, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ ದೇಶಗಳು ಖಾಯಂ ಸದಸ್ಯರಾಷ್ಟ್ರಗಳಾಗಿವೆ.

ಸದ್ಯ ಮತ ಚಲಾವಣೆಯಲ್ಲಿ ರಷ್ಯಾ ಗೆ 11 ರಾಷ್ಟ್ರಗಳು ಬೆಂಬಲ ಸೂಚಿಸಿದ್ದು ಒಂದು ರಾಷ್ಟ್ರ ಇಲ್ಲವೆಂದು 3 ರಾಷ್ಟ್ರಗಳು ತಟಸ್ಥವಾಗಿವೆ.

ರಷ್ಯಾದ ಆಕ್ರಮಣಕಾರಿ ನೀತಿಯ ವಿರುದ್ಧ ಅಮೆರಿಕಾ ಸೇರಿದಂತೆ ಕೆಲವು ರಾಷ್ಟ್ರಗಳು ಖಂಡನೀಯ ನಿರ್ಣಯವನ್ನು UN ಭದ್ರತಾ ಮಂಡಳಿಯಲ್ಲಿ ಮಂಡಿಸಿ ರಷ್ಯಾ ಕೂಡಾಲೇ ತನ್ನ ಸೇನೆಯನ್ನು ಹಿಂಪಡೆಯಬೇಕೆಂದಿದ್ದವು . ನಿರ್ಣಯದ ಪರವಾಗಿ 11, ವಿರುದ್ಧವಾಗಿ 1, 4 ರಾಷ್ಟ್ರಗಳು ಗೈರ ಆಗಿದ್ದವು.

ನಿರ್ಣಯದ ಪರವಾಗಿ 11 ರಾಷ್ಟ್ರಗಳ ಮತ ಚಲಾವಣೆ ಆಗಿದ್ದರು ಸಹ ನಿರ್ಣಯ ಸೋಲಲು ಕಾರಣ, ಯಾವುದೇ ಒಬ್ಬ ಖಾಯಂ ಸದಸ್ಯ ರಾಷ್ಟ್ರ ತನ್ನಲ್ಲಿರುವ ವೀಟೋ ಅಧಿಕಾರ ಉಪಯೋಗಿಸಿ ಬಹುಮತ ಪಡೆದ ನಿರ್ಣಯವನ್ನು ಸೋಲಿಸಬಹುದು .

ಸದ್ಯ ರಷ್ಯಾ ಖಾಯಂ ಸದಸ್ಯ ರಾಷ್ಟ್ರವಾಗಿರುವುದರಿಂದ ತನ್ನ ವೀಟೋ ಪವರ್ ಉಪಯೋಗಿಸಿ ಬಹುಮತ ಪಡೆದ ನಿರ್ಣಯವನ್ನು ಸೋಲುವಂತೆ ಮಾಡಿದೆ.

ಒಟ್ಟಾರೆಯಲ್ಲಿ 11 ರಾಷ್ಟ್ರಗಳು ರಷ್ಯಾ ವಿರುದ್ಧವಾಗಿ ಮತ ಚಲಾಯಿಸಿದ್ದರೂ ರಷ್ಯಾ ವಿರುದ್ಧ ನಿರ್ಣಯ ಸೋಲು ಕಂಡಿದೆ.

Edited By : Nirmala Aralikatti
PublicNext

PublicNext

26/02/2022 11:55 am

Cinque Terre

91 K

Cinque Terre

2

ಸಂಬಂಧಿತ ಸುದ್ದಿ