ಮಾಸ್ಕೋ: ವಿಶ್ವದ ಕಣ್ಣು ರಷ್ಯಾ- ಉಕ್ರೇನ್ನತ್ತ ನೆಟ್ಟಿದೆ. ರಷ್ಯಾ ಗಡಿಯಾದ್ಯಂತ ಸುಮಾರು ಲಕ್ಷ ಸೈನಿಕರನ್ನು ನಿಯೋಜಿಸಿದೆ. ಯಾವುದೇ ಕ್ಷಣದಲ್ಲಾದರೂ ಉಕ್ರೇನ್ ಮೇಲೆ ರಷ್ಯಾ ದಂಡೆತ್ತಿ ಹೋಗಬಹುದು ಎಂದು ಅಮೆರಿಕ ಈಗಾಗಲೇ ಹೇಳಿದ್ದು, ಉಕ್ರೇನ್ನಲ್ಲಿರುವ ಯುಎಸ್ ನಾಗರಿಕರು ಆದಷ್ಟು ಶೀಘ್ರವೇ ದೇಶಕ್ಕೆ ಮರಳಿ ಎಂದು ಶ್ವೇತಭವನ ಸೂಚನೆ ನೀಡಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಣುಬಾಂಬ್ ಜಗತ್ತಿಗೆ ಮಹಾಯುದ್ಧದ ಭೀತಿ ಸೃಷ್ಟಿಸಿದೆ. ಇದರಿಂದಾಗಿ ಇಡೀ ವಿಶ್ವಕ್ಕೆ ಯುದ್ಧ ಭೀತಿ ಕಾಡುತ್ತಿದ್ದು, ಖುದ್ದು ಅಮೆರಿಕದ ವೈಟ್ ಹೌಸ್‌ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಘೋಷಣೆ ಮಾಡಿದ್ದು, ಉಕ್ರೇನ್ ಮೇಲೆ ಸೈನ್ಯ ನುಗ್ಗಿಸುವ ಮುನ್ನ ಬಾಂಬ್‌ಗಳ ಸುರಿಮಳೆಗೈಯ್ಯಲು ರಷ್ಯಾ ಸಿದ್ಧವಾಗಿದೆ ಎಂದು ಅವರು ಹೇಳಿದ್ದಾರೆ.
PublicNext
15/02/2022 02:54 pm