ಘಾನಾ : ಸ್ಫೋಟಕಗಳನ್ನು ಸಾಗಿಸುತ್ತಿದ್ದ ಟ್ರಕ್ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ 17 ಜನ ಸಾವನ್ನಪ್ಪಿ 59 ಜನ ಗಾಯಗೊಂಡ ಘಟನೆ ಗುರುವಾರ ಪಶ್ಚಿಮ ಘಾನಾ ಪಟ್ಟಣದಲ್ಲಿ ಸಂಭವಿಸಿದೆ.ಈ ಕುರಿತು ಅಲ್ಲಿನ ಸರ್ಕಾರ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದು ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದೆ.
ಖನಿಜ-ಸಮೃದ್ಧ ಪಶ್ಚಿಮ ಆಫ್ರಿಕನ್ ದೇಶದ ರಾಜಧಾನಿ ಅಕ್ರಾದಿಂದ ಪಶ್ಚಿಮಕ್ಕೆ ಸುಮಾರು 300 ಕಿಲೋಮೀಟರ್ (180 ಮೈಲುಗಳು) ದೂರದಲ್ಲಿರುವ ಬೊಗೊಸೊ ನಗರದ ಸಮೀಪ ಈ ಅಪಘಾತ ಸಂಭವಿಸಿದೆ. ಗಾಯಗೊಂಡ 59 ಜನರಲ್ಲಿ 42 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಕೆಲವರ ತೀರಾ ಗಂಭೀರವಾಗಿರುವವರನ್ನು ಅಕ್ರಾದಲ್ಲಿನ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಇನ್ನು ಘಟನೆ ಕುರಿತು ಘಾನಾದ ಅಧ್ಯಕ್ಷ ನಾನಾ ಅಕುಫೊ-ಅಡ್ಡೊ ಇದು ನಿಜಕ್ಕೂ ದುಃಖದ ದುರದೃಷ್ಟಕರ ಮತ್ತು ದುರಂತ ಘಟನೆ ಎಂದಿದ್ದಾರೆ.
PublicNext
21/01/2022 08:57 am