ದಕ್ಷಿಣ ಕೋರಿಯಾ: ಹೆಣ್ಣುಮಕ್ಕಳನ್ನ ನಾವು ಭೂಮಿ ತಾಯಿಗೆ ಹೋಲಿಸುತ್ತೇವೆ. ಹೆಣ್ಣುಮಕ್ಕಳನ್ನ ನಾವು ದೇವಾನುದೇವತೆಗಳಿಗೆ ಹೋಲಿಸುತ್ತಿವೇ. ಆದರೆ ಹಸುವನ್ನ ಹೆಣ್ಣಿಗೆ ಹೋಲಿಸಿದರೂ ಅಲ್ಲಿ ಹಸುವನ್ನ ಗೋಮಾತೆ ಅಂತಲೇ ಕರೆಯುತ್ತೇವೆ. ಆದರೆ, ಇಲ್ಲಿಯ ಹಾಲು ಉತ್ಪನ್ನಗಳ ಕಂಪನಿಯೊಂದು ಹೆಣ್ಣನ್ನ ಹಸುವಿಗೆ ಹೋಲಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಹಚ್ಚ-ಹಸಿರಿರೋ ಜಾಗದಲ್ಲಿ ಮಹಿಳೆಯರನ್ನೆ ಇಲ್ಲಿ ತೋರಿಸಲಾಗಿದೆ. ಅದನ್ನಚಿತ್ರೀಕರಿಸಲು ಬರುವ ವ್ಯಕ್ತಿಗೆ ಅಲ್ಲೊಂದು ಶಾಕ್ ಕಾದಿರುತ್ತದೆ. ಚೆಂದದ ಹೆಣ್ಣುಮಕ್ಕಳು ದಿಢೀರನೇ ಹಸುವಾಗಿ ಬದಲಾಗುತ್ತಾರೆ.
ಈ ಪರಿಕಲ್ಪನೆ ಏನೋ ಚೆನ್ನಾಗಿದೆ. ಆದರೆ ದಕ್ಷಿಣ ಕೋರಿಯಾದ ಜನ ಇದನ್ನ ಕಂಡು ಸಿಟ್ಟಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ವೈರಲ್ ಆಗಿದೆ. ಇದರಿಂದ ಜನ ಇನ್ನಷ್ಟು ರೊಚ್ಚಿಗೆದ್ದಿದ್ದಾರೆ. ಅದಕ್ಕೇನೆ ಕಂಪನಿ ಈಗ ಕ್ಷಮೆಯಾಚಿಸಿದೆ. ಆದರೂ ಈ ವೀಡಿಯೋ ವೈರಲ್ ಆಗುತ್ತಲೇ ಇದೆ.
PublicNext
16/12/2021 10:47 pm