ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ತ್ರೀ ಶಿಕ್ಷಣ ಹೋರಾಟಗಾರ್ತಿ ಮಲಾಲಾ

ಬರ್ಮಿಂಗ್ ಹ್ಯಾಮ್: ಸ್ತ್ರೀ ಶಿಕ್ಷಣಕ್ಕಾಗಿಯೇ ಹೋರಾಡಿ ಇಡೀ ದೇಶ-ವಿದೇಶವೇ ತಿರುಗಿ ನೋಡುವಂತೆ ಮಾಡಿದ್ದ,ನೋಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯುಸೂಫ್‌ಝಾಯಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಪಾಕಿಸ್ತಾನ ಮೂಲದ ಮಲಾಲಾ ಬ್ರಿಟನ್‌ನ ಬರ್ಮಿಂಗ್ ಹ್ಯಾಮ್‌ ನಲ್ಲಿರೊ ತಮ್ಮ ನಿವಾಸದಲ್ಲಿಯೇ ಸರಳವಾಗಿ ವಿವಾಹ ಆಗಿದ್ದಾರೆ.

24 ವರ್ಷದ ಮಲಾಲಾ ಅವರನ್ನ ಅಸ್ಸರ್ ಮದುವೆ ಆಗಿದ್ದಾರೆ. ಹಿರಿಯರ ಸಮ್ಮುಖದಲ್ಲಿಯೇ ಇವ್ರು 'ನಿಖಾ' ಆಗಿದ್ದಾರೆ. ತಾಲಿಬಾನ್ ನಲ್ಲಿ ಸ್ತ್ರೀ ಶಿಕ್ಷಣಕ್ಕೆ ಸಾಕಷ್ಟು ನಿರ್ಬಂಧಗಳಿವೆ. ಅದನ್ನ ವಿರೋಧಿಸಿದಿಕ್ಕೇನೆ, 2012 ಅಕ್ಟೋಬರ್-9 ರಂದು ತೆಹ್ರಿಕ್ -ಇ-ತಾಲಿಬಾನ್ ಪಾಕಿಸ್ತಾನ ದಿಂದಲೇ ಮಲಾಲಾ ಮೇಲೆ ಗುಂಡಿನ ದಾಳಿ ನಡೆದಿತ್ತು.

ಇದನ್ನೆಲ್ಲ ಎದುರಿಸುತ್ತಲೇ ಸ್ತ್ರೀ ಶಿಕ್ಷಣಕ್ಕಾಗಿ ಹೋರಾಡಿದ ಮಲಾಲಾ ದಾಂಪತ್ಯ ಜೀವನಕ್ಕೂ ಈಗ ಕಾಲಿಟ್ಟಿದ್ದಾರೆ. ಅಸ್ಸರ್ ಜೊತೆಗೆ ನಾನು ಹೊಸ ಪಯಣ ಆರಂಭಿಸಿದ್ದೇನೆ. ನಿಮ್ಮ ಆಶೀರ್ವಾದ ಇರಲಿ ಅಂತಲೇ ಮಲಾಲಾ ಟ್ವಿಟರ್ ಮೂಲಕ ತಮ್ಮ ಮದುವೆ ವಿಷಯವನ್ನ ತಿಳಿಸಿದ್ದಾರೆ.ಉಳಿದಂತೆ ಮಲಾಲಾ ಕಳೆದ ವರ್ಷ ಆಕ್ಸರ್ಫಡ್ ವಿಶ್ವವಿದ್ಯಾಲಯದಿಂದ ಪದವಿಯನ್ನೂ ಪಡೆದಿದ್ದಾರೆ.

Edited By :
PublicNext

PublicNext

10/11/2021 03:58 pm

Cinque Terre

14.4 K

Cinque Terre

0

ಸಂಬಂಧಿತ ಸುದ್ದಿ