ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಹಾರ ಬಿಕ್ಕಟ್ಟು : 2025ರವರೆಗೆ ಕಡಿಮೆ ಊಟ ಮಾಡುವಂತೆ ಅಧ್ಯಕ್ಷರ ಆಜ್ಞೆ

ಪ್ಯೊಂಗ್ಯಾಂಗ್ : ಕೊರೊನಾ ಶುರುವಾಗಿನಿಂದ ಉತ್ತರ ಕೊರಿಯಾ ತನ್ನ ಎಲ್ಲ ಗಡಿಗಳನ್ನು ಮುಚ್ಚಿರುವುದರಿಂದ ಚೀನಾದಿಂದ ಯಾವುದೇ ಆಹಾರ ಪೂರೈಕೆ ಆಗುತ್ತಿಲ್ಲ.ಜೊತೆಗೆ ಜಾಗತಿಕವಾಗಿ ಪರಮಾಣು ಮತ್ತು ಶಸ್ತ್ರಾಸ್ತ್ರ ಕಾರ್ಯಕ್ರಮವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಉತ್ತರ ಕೊರಿಯಾ ಮೇಲಿನ ಕಠಿಣ ನಿರ್ಬಂಧಗಳು ಇಂದು ಆಹಾರ ಸಂಪನ್ಮೂಲಗಳು ಒಣಗಲು ಕಾರಣವಾಗಿವೆ.

ಇದರಿಂದಾಗಿ ದೇಶದಲ್ಲಿ ಆಹಾರದ ಬಿಕ್ಕಟ್ಟು ಆರಂಭವಾಗಿದೆ. ಇದರಿಂದಾಗಿ ಉತ್ತರ ಕೊರಿಯಾದ ಸುಪ್ರೀಂ ಲೀಡರ್ ಕಿಮ್ ಜಾಂಗ್ ಉನ್ ದೇಶದಲ್ಲಿ ಆಹಾರ ಬಿಕ್ಕಟ್ಟು ಸೃಷ್ಟಿಯಾಗಿದೆ. 2025 ರವರೆಗೆ ಕಡಿಮೆ ಊಟ ಮಾಡುವಂತೆ ಜನರಿಗೆ ಆದೇಶಿಸಿದ್ದಾರೆ.

ಉತ್ತರ ಕೊರಿಯಾವು ಈ ವರ್ಷ ಸುಮಾರು 860,000 ಟನ್ ಗಳ ಆಹಾರದ ಕೊರತೆಯನ್ನು ಎದುರಿಸುತ್ತಿದೆ. ಯುಎನ್ ನ ಆಹಾರ ಮತ್ತು ಕೃಷಿ ಸಂಸ್ಥೆಯ ಮುನ್ಸೂಚನೆ ಪ್ರಕಾರ ಮುಂದಿನ ತಿಂಗಳ ಆರಂಭದಲ್ಲಿ ದೇಶವು ಕಠಿಣವಾದ ಅವಧಿ ಅನುಭವಿಸಬಹುದು ಎಂದು ಎಚ್ಚರಿಸಿದೆ.

ಜೂನ್ನಲ್ಲಿ ಹಿರಿಯ ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಿಮ್ ಜಾಂಗ್ ಉನ್ ದೇಶದ ಆಹಾರ ಸಂಪನ್ಮೂಲಗಳ ಕೆಟ್ಟ ಸ್ಥಿತಿಯನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದರು. ಆಹಾರ ಬಿಕ್ಕಟ್ಟು 2025 ರವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಉತ್ತರ ಕೊರಿಯಾದಲ್ಲಿ ಈಗಾಗಲೇ ಲಕ್ಷಾಂತರ ಜನ ಅಪೌಷ್ಟಿಕತೆ ಎದುರಿಸುತ್ತಿದ್ದಾರೆ ಮತ್ತು ಹೆಚ್ಚಿನ ಕುಟುಂಬಗಳು ದಿನಕ್ಕೆ ಒಂದು ಅಥವಾ ಎರಡು ಊಟಗಳನ್ನು ಮಾತ್ರ ತಿನ್ನುತ್ತವೆ.

Edited By : Nirmala Aralikatti
PublicNext

PublicNext

01/11/2021 07:26 am

Cinque Terre

45.73 K

Cinque Terre

11