ಬೀಜಿಂಗ್: ಚೀನಾ ದೇಶ ಭಾರತಕ್ಕೆ ಪರೋಕ್ಷವಾಗಿ ಎಚ್ಚರಿಕೆ ಕೊಟ್ಟಿದೆ. ಹೌದು. ಗಡಿಗೆ ಸಂಬಂಧಿಸಿದಂತೆ ಈಗ ಚೀನಾ ಹೊಸ ಕಾನೂನು ರೂಪಿಸಿಕೊಂಡಿದೆ.ಅದನ್ನ ತನ್ನ ಸಂಸತ್ತಿನಲ್ಲೂ ಮಂಡಿಸಿ ಒಪ್ಪಿಗೆ ಪಡೆದಿದೆ. ಬರೋ ವರ್ಷ ಜನವರಿ-1ರಿಂದಲೇ ಭೂಗಡಿ ಹೊಸ ಕಾನೂನು ಜಾರಿಗೆ ಬರಲಿದೆ.
ಚೀನಾ ದೇಶ ಅಖಂಡತೆ ಮತ್ತು ಸಾರ್ವಭೌಮತ್ವವನ್ನ ಕಾಪಾಡಲು ಹೊಸ ಭೂಗಡಿ ಕಾನೂನು ಜಾರಿಗೆ ತರ್ತಾಯಿದೆ. ಆದರೆ, ಗಡಿಗೆ ಸಂಬಂಧಿಸಿದಂತೆ ಭಾರತದೊಂದಿಗೆ ಚೀನಾದ ಖ್ಯಾತೆ ಇದ್ದೇ ಇದೆ. ಅದಕ್ಕೇನೆ ಈ ಭೂಗಡಿ ಕಾನೂನು ಅನುಷ್ಠಾನಕ್ಕೆ ತಂದು ಭಾರತಕ್ಕೆ ಎಚ್ಚರಿಕೆ ಕೊಟ್ಟಂತಿದೆ. ಹಾಗೇನೆ ಈಗ ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಚೀನಾದ ಭೂಗಡಿಯಲ್ಲಿ ಯಾವುದೇ ರೀತಿಯ ಉಲ್ಲಂಘನೆ ಕಂಡು ಬಂದರೆ, ದೇಶದ ಅಖಂಡತೆಗೆ ಧಕ್ಕೆ ಬಂದ್ರೆ, ಈ ಭೂಗಡಿ ಕಾನೂನು ಚೀನಾವನ್ನ ರಕ್ಷಿಸಲಿದೆ. ಒಟ್ಟಾರೆ, ಚೀನಾ ಏನೋ ಮಾಡೋಕೆ ಹೊರಟಿದೆ.
PublicNext
24/10/2021 09:19 pm