ಚೀನಾ: ಹೆಣ್ಣುಮಕ್ಕಳಿಗೆ ಚಿನ್ನ ಅಂದ್ರೆ ಬಲು ಇಷ್ಟ. ಅದರಲ್ಲೂ ಗಂಡ ಕೊಡಿಸಿದ ಚಿನ್ನ ಅಂದ್ರೆ ಪ್ರಾಣ. ಹೌದು ಇಲ್ಲಿಯ ಹುಬೈ ಪ್ರಾಂತ್ಯದ ಹುಡ್ಗಿ ಮದುವೆಯಲ್ಲಿ ಭಾರಿ ತೂಕದ ಚಿನ್ನದ ಆಭರಣ ಧರಿಸಿಕೊಂಡು ಕಷ್ಟಪಟ್ಟಿದ್ದಾಳೆ. ಮದುವೆ ಸಂದರ್ಭದ ಆಕೆಯ ಚಿನ್ನ ಧರಿಸಿದ ಒಂದಷ್ಟು ಫೋಟೋಗಳು ಈಗ ವೈರಲ್ ಆಗಿವೆ.
ಹುಬೈ ಪ್ರಾಂತ್ಯದ ಹುಡ್ಗಿಗೆ ಹುಡ್ಗನ ಮನೆಯವ್ರೂ ಕೂಡ ಆಭರಣ ಕೊಟ್ಟಿದ್ದಾರೆ. ಅವುಗಳು ಸೇರಿ ಮೈತುಂಬ ಆಭರಣಗಳೇ ಕಾಣುತ್ತಿವೆ. ಭಾರಿ ತೂಕದ ಆಭರಣ ಧರಿಸಿದ ಆ ಹುಡ್ಗಿ ಓಡಾಡಲು ಆ ಕ್ಷಣ ಕಷ್ಟ ಪಟ್ಟಿದ್ದಾಳೆ. ಕೊರಳಲ್ಲಿ ನಕ್ಲೆಸ್,ಕೈಗಳಲ್ಲಿ ದಪ್ಪ ಚಿನ್ನದ ಬಳೆ ಎಲ್ಲವೂ ಅತಿ ಹೆಚ್ಚಿನ ತೂಕದ್ದೇ ಆಗಿವೆ. ಅದಕ್ಕೇನೆ ಈ ಹುಡ್ಗಿ ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾಳೆ.
PublicNext
14/10/2021 07:41 pm