ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾಕ್ ನಲ್ಲಿ ಆಂತರಿಕ ಕಲಹ : ಪ್ರಧಾನಿ ಮತ್ತು ಸೇನಾ ಮುಖ್ಯಸ್ಥನ ನಡುವೆ ಮನಸ್ತಾಪ

ಪಾಕಿಸ್ತಾನ : ಸಣ್ಣ ವಿಷಯವೊಂದಕ್ಕೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಕಮಾರ್ ಜಾವೇದ್ ಬಾಜ್ವಾ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ ಐ ಗೆ ಮುಖ್ಯಸ್ಥರನ್ನು ನೇಮಕ ಮಾಡುವ ಸಂಬಂಧ ಈ ಸಂಘರ್ಷ ಪ್ರಾರಂಭವಾಗಿದೆ ಎಂದೂ ಗೊತ್ತಾಗಿದೆ.

ಪಾಕಿಸ್ತಾನ ಸರ್ಕಾರ ಅಲ್ಲಿನ ಸೇನೆಯ ಕೈಯಲ್ಲೇ ಇರುತ್ತದೆ. ಪ್ರಧಾನಮಂತ್ರಿಯಿದ್ದರೂ ಅವರು ಸೇನಾ ಮುಖ್ಯಸ್ಥರಿಗೆ ವಿಧೇಯರಾಗಿಯೇ ಇರಬೇಕು ಎಂಬುದು ಹಲವು ಬಾರಿ ಸಾಬೀತಾಗಿದೆ. ಐಎಸ್ ಐಗೆ ನೂತನ ಮಹಾ ನಿರ್ದೇಶಕರನ್ನಾಗಿ ಲೆಫ್ಟಿನೆಂಟ್ ಜನರಲ್ ನದೀಮ್ ಅಹ್ಮದ್ ಅಂಜುಮ್ ರನ್ನು ನೇಮಕ ಮಾಡಲಾಗಿದೆ. ಆದರೆ ಈ ನೇಮಕಾತಿಯನ್ನು ಪ್ರಧಾನಮಂತ್ರಿ ಇಮ್ರಾನ್ ಖಾನ್ ತಿರಸ್ಕರಿಸಿದ್ದಾರೆ.

ಐಎಸ್ ಐ ಡಿಜಿಯನ್ನು ನೇಮಕ ಮಾಡುವ ಹಕ್ಕು ಪ್ರಧಾನಿಗೆ ಇದೆ. ಹೀಗಾಗಿ ಸಶಸ್ತ್ರಪಡೆಯ ನೇಮಕವನ್ನು ನಾನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.

Edited By : Nirmala Aralikatti
PublicNext

PublicNext

14/10/2021 03:34 pm

Cinque Terre

62.23 K

Cinque Terre

5

ಸಂಬಂಧಿತ ಸುದ್ದಿ