ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೀಗೊಂದು ಆಚರಣೆ : ಪತಿಯ ಶವದ ಜೊತೆಗೆ ಮಲಗಬೇಕು.. ಜಗಳದ ಬಳಿಕ ಸೆಕ್ಸ್ ಮಾಡಬೇಕು!

ವಿಶ್ವದಲ್ಲಿ ಇನ್ನೂ ಕೆಲವು ವಿಲಕ್ಷಣ ಪದ್ಧತಿಗಳಿವೆ ಅದರಲ್ಲೂ ಪಚ್ಚಿಮ ಕೀನ್ಯಾ ಲುವೋ ಬುಡಕಟ್ಟಿನ ಜನರು ವಿಚಿತ್ರ ಸಂಪ್ರದಾಯವನ್ನು ಆಚರಿಸುತ್ತಾರೆ. ಇವರ ಕೆಲವೊಂದು ಪದ್ಧತಿಗಳು ಕಲ್ಪನೆಗೂ ನಿಲುಕದ್ದಾಗಿರುತ್ತವೆ. ಲುವೋ ಬುಡಕಟ್ಟಿನ ಜನಾಂಗದಲ್ಲಿ ಪತಿ ಸಾವಿನ ನಂತರ ಪತ್ನಿಯ ಶುದ್ಧೀಕರಣ ನಡೆಯುತ್ತದೆ. ಗಂಡ ಸತ್ತ ನಂತರ ಹೆಂಡತಿಯಾದವಳು ಒಂದು ರಾತ್ರಿ ಶವದ ಜೊತೆ ಮಲಗಬೇಕು. ಗಂಡನ ಜೊತೆಗೆ ಸಂಬಂಧ ಬೆಳೆಸಿದಂತೆ ಕಲ್ಪನೆ ಮಾಡಬೇಕು. ಆಗ ಪತಿಯ ಆತ್ಮಕ್ಕೆ ಶಾತಿ ಸಿಗುವುದು ಮಾತ್ರವಲ್ಲದೆ ಪತ್ನಿ ಶುದ್ಧವಾಗುತ್ತಾಳೆ. ಈ ಸಂಪ್ರದಾಯ ಆಚರಿಸಿದ ನಂತರ ಪತ್ನಿ ಬೇರೊಂದು ವಿವಾಹ ಆಗಬಹುದು.

ಗಂಡ ಹೆಂಡತಿ ನಡುವೆ ಜಗಳ ನಡೆಯುವುದು ಸಾಮಾನ್ಯ . ಆದರೆ ಒಂದು ವೇಳೆ ಜಗಳವಾದರೆ ಇಬ್ಬರು ಕೋಲಿನಿಂದ ಹೊಡೆದುಕೊಳ್ಳುವಂತಿಲ್ಲ. ಹೀಗೆ ಮಾಡಿದರೆ ಪಾಪ ಅಂಟಿಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಲುವೋ ವಿಚಿತ್ರ ಸಂಪ್ರದಾಯವನ್ನು ನಂಬಿ ಬದುಕುತ್ತಿದ್ದಾರೆ.

ಜಗಳದ ಬಳಿಕ ಪತಿ ಮತ್ತು ಪತ್ನಿಗೆ ಹಿರಿಯರು ಗಿಡಮೂಲಿಕೆಯನ್ನು ಕುಡಿಯಲು ನೀಡುತ್ತಾರೆ, ಇದನ್ನು ಸೇವಿಸಿ ಶಾರೀರಿಕ ಸಂಬಂಧ ಬೆಳೆಸಲು ಹೇಳುತ್ತಾರೆ. ಇದರಿಂದ ಇಬ್ಬರ ನಡುವಿನ ಮನಸ್ಥಾಪಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆ ಲುವೋ ಬುಡಕಟ್ಟಿನಲ್ಲಿದೆ.

ಲುವೋ ಬುಡಕಟ್ಟಿನಲ್ಲಿ ಬಹುಪತ್ನಿತ್ವ ಜಾರಿಯಲ್ಲಿದೆ. ಗಂಡ ಎಷ್ಟು ಜನರನ್ನು ವಿವಾಹವಾಗಬಹುದು. ಇದಕ್ಕೆ ಹೆಂಡತಿಯರು ವಿರೋಧ ವ್ಯಕ್ತಪಡಿಸುವುದಿಲ್ಲ. ಅಲ್ಲಿನ ಸಂಸ್ಕೃತಿ ಮತ್ತು ವಿಲಕ್ಷಣ ಪದ್ಧತಿಗಳ ನಿಜಕ್ಕೂ ವಿಚಿತ್ರವಾಗಿವೆ.

Edited By : Nirmala Aralikatti
PublicNext

PublicNext

27/09/2021 03:53 pm

Cinque Terre

28.66 K

Cinque Terre

7

ಸಂಬಂಧಿತ ಸುದ್ದಿ