ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಫ್ಘಾನ್ ಅಧಿಕಾರಕ್ಕಾಗಿ ಕಿತ್ತಾಟ: ತಾಲಿಬಾನ್ ನಾಯಕ ಮುಲ್ಲಾ ಬರದಾರ್ ಒತ್ತೆಯಾಳು, ಹೈಬತುಲ್ಲಾ ಅಖುಂಡಜಾದ ಸಾವು

ಕಾಬೂಲ್: ಅಫ್ಘಾನಿಸ್ತಾನದಲ್ಲಿನ ತಾಲಿಬಾನ್‌ ಸರ್ಕಾರ ಮಂಗಳವಾರ ಉಪ ಸಚಿವರುಗಳ ಹೆಸರು ಪ್ರಕಟಿಸಿದೆ. ಆದರೆ ಇದರಲ್ಲೂ ಮಹಿಳೆಯರ ಹೆಸರು ಇಲ್ಲ. ಈ ಮಧ್ಯೆ ತಾಲಿಬಾನ್‌ನ ಅಧಿಕಾರಕ್ಕಾಗಿರುವ ಕಿತ್ತಾಟದಲ್ಲಿ ಉಪ ಪ್ರಧಾನಿ ಮುಲ್ಲಾ ಬರದಾರ್ ಒತ್ತೆಯಾಳು ಆಗಿದ್ದು, ಗುಂಪಿನ ಆಧ್ಯಾತ್ಮಿಕ ನಾಯಕ ಹೈಬತುಲ್ಲಾ ಅಖುಂಡಜಾದ ಸಾವಿಗೀಡಾಗಿದ್ದಾರೆ ಎಂದು ಬ್ರಿಟನ್ ಮೂಲದ ನಿಯತಕಾಲಿಕೆ ದಿ ಸ್ಪೆಕ್ಟೇಟರ್ ಸೋಮವಾರ ವರದಿ ಮಾಡಿದೆ.

ಬರದಾರ್ ಬಣ ಮತ್ತು ಹಕ್ಕಾನಿ ನೆಟ್‌ವರ್ಕ್ ನಡುವಿನ ಸರ್ಕಾರ ರಚನೆಯ ಮಾತುಕತೆಯ ಸಂದರ್ಭದಲ್ಲಿ ಈ ಘರ್ಷಣೆ ನಡೆದಿದೆ ಎನ್ನಲಾಗಿದೆ. ಪಾಕಿಸ್ತಾನದ ಇಂಟರ್-ಸರ್ವಿಸಸ್ ಇಂಟೆಲಿಜೆನ್ಸ್ (ISI) ಮುಖ್ಯಸ್ಥರು ಹಕ್ಕಾನಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗಿದೆ ಎಂದಿದೆ. ಎಲ್ಲಾ ಪ್ರಮುಖ ಹುದ್ದೆಗಳು ಪಾಕಿಸ್ತಾನದ ನಿಷ್ಠಾವಂತರಿಗೆ, ಮುಖ್ಯವಾಗಿ ಹಕ್ಕಾನಿ ನೆಟ್‌ವರ್ಕ್‌ನವರಿಗೆ ನೀಡಲಾಗಿದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ ಆರಂಭದಲ್ಲಿ ನಡೆದ ಘರ್ಷಣೆಗಳು ಉಂಟಾಗಿದೆ ಎಂದು ದಿ ಸ್ಪೆಕ್ಟೇಟರ್ ಹೇಳಿದೆ. ಸಭೆಯಲ್ಲಿ ಹಕ್ಕಾನಿ ನೆಟ್ವರ್ಕ್ ನಾಯಕ ಖಲೀಲ್-ಉಲ್-ರೆಹಮಾನ್ ಹಕ್ಕಾನಿ ತನ್ನ ಕುರ್ಚಿಯಿಂದ ಎದ್ದು ಬರದಾರ್​​ಗೆ ಹೊಡೆದಿದ್ದಾರೆ ಎಂದು ದಿ ಸ್ಪೆಕ್ಟೇಟರ್ ವರದಿ ಹೇಳಿದೆ. ಬರದಾರ್ ತಾಲಿಬಾನ್ ಅಲ್ಲದ ನಾಯಕರು ಮತ್ತು ಅಲ್ಪಸಂಖ್ಯಾತ ಜನಾಂಗದವರನ್ನು ಒಳಗೊಂಡ ಸಚಿವಸಂಪುಟಕ್ಕೆ ಒತ್ತಾಯಿಸಿದ್ದು, ಇದು ಪ್ರಪಂಚದ ಇತರ ಭಾಗಗಳಿಗೆ ಹೆಚ್ಚು ಸ್ವೀಕಾರಾರ್ಹವಾಗಿದೆ.

ಘರ್ಷಣೆಯ ನಂತರ ಅವರು ಸ್ವಲ್ಪ ಸಮಯದವರೆಗೆ ಕಣ್ಮರೆಯಾದರು ಮತ್ತು ಕಂದಹಾರ್‌ನಲ್ಲಿ ಮತ್ತೆ ಕಾಣಿಸಿಕೊಂಡರು. ಅವರು ತಮ್ಮನ್ನು ಬೆಂಬಲಿಸುತ್ತಿರುವ ಬುಡಕಟ್ಟು ನಾಯಕರ ಸಭೆಯನ್ನು ನಡೆಸಿದರು. ಆದರೆ ತಾಲಿಬಾನ್ ನಿಯಂತ್ರಣದಲ್ಲಿರುವ ಸರ್ಕಾರಿ ಟಿವಿ ನೆಟ್‌ವರ್ಕ್‌ನಲ್ಲಿ ವಿಡಿಯೊ ಸಂದೇಶವನ್ನು ಬಿಡುಗಡೆ ಮಾಡಲು ಒತ್ತಾಯಿಸಲಾಯಿತು. ಸಂದೇಶವು 'ಒತ್ತೆಯಾಳು ವಿಡಿಯೋದಂತೆ ಕಾಣುತ್ತದೆ' ಎಂದು ದಿ ಸ್ಪೆಕ್ಟೇಟರ್ ವರದಿ ಮಾಡಿದೆ.

Edited By : Vijay Kumar
PublicNext

PublicNext

21/09/2021 05:09 pm

Cinque Terre

27.37 K

Cinque Terre

0