ನ್ಯೂಯಾರ್ಕ್: ಜಾಗತಿಕ ಫ್ಯಾಶನ್ ಶೋ ಮೆಟ್ ಗಾಲಾ ದಲ್ಲಿ ಭಾರತೀಯ ಸುಧಾ ರೆಡ್ಡಿ ಭಾಗವಹಿಸಿದ್ದಾರೆ. ಜಗತ್ತಿನ ಪ್ರತಿಷ್ಟಿತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ ದಲ್ಲಿ ಭಾಗವಹಿಸಲು ಕೋಟ್ಯಧಿಪತಿಗಳಿಗೆ ಮಾತ್ರ ಸಾಧ್ಯ. ಇಲ್ಲಿ ಒಂದು ಟಿಕೆಟ್ಗೆ 30 ಸಾವಿರ ಯುಸ್ ಡಾಲರ್ ಇದೆ.
1948 ರಿಂದ ಅಮೆರಿಕದ ನ್ಯೂಯಾರ್ಕ್ ಮೆಟ್ರೊಪಾಲಿಟಿನ್ ಕಲಾ ವಸ್ತುಸಂಗ್ರಹಾಲಯಕ್ಕೆ ನಿಧಿ ಸಂಗ್ರಹಾರ್ಥವಾಗಿ ನಡೆಯುವ ಮೆಟ್ ಗಾಲಾ ಫ್ಯಾಶನ್ ಶೋ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ನಡೆದಿರಲಿಲ್ಲ.
ಈ ವರ್ಷ ಕಳೆದ ಭಾನುವಾರದಿಂದ ಆರಂಭವಾಗಿದ್ದು ಜಗದ್ವಿಖ್ಯಾತ ಮಾಡೆಲ್ ಗಳು ಈ ಫ್ಯಾಶನ್ ಶೋದಲ್ಲಿ ಬೆಡಗು ಭಿನ್ನಾಣಗಳಿಂದ ಕಂಗೊಳಿಸುತ್ತಿದ್ದಾರೆ. ಇಂತಹ ಪ್ರಸಿದ್ಧ ಜಾಗತಿಕ ಶೋನಲ್ಲಿ ಈ ವರ್ಷ ಏಕೈಕ ಭಾರತೀಯರೊಬ್ಬರು ಮಾತ್ರ ಭಾಗವಹಿಸಿದ್ದಾರೆ. ಅವರೇ ಸುಧಾ ರೆಡ್ಡಿ.
ಅಮೆರಿಕದಲ್ಲಿರುವ ಬಿಲಿಯನೇರ್ ಹಾಗೂ ಮೇಘಾ ಎಂಜಿನಿಯರಿಂಗ್ ಆ್ಯಂಡ್ ಇನ್ಫ್ರಾಸ್ಟಕ್ರ್ಚರ್ ನ ಎಂಡಿ ಮೇಘ ಕೃಷ್ಣ ರೆಡ್ಡಿ ಅವರ ಹೆಂಡತಿ ಸುಧಾ ರೆಡ್ಡಿ ಅವರು ಮೆಟ್ ಗಾಲಾದಲ್ಲಿ ಭಾಗವಹಿಸಿದ್ದಾರೆ. ಫಲ್ಗುಣಿ ಹಾಗೂ ಶೇನ್ ಪಿಕಾಕ್ ಅವರು ಸಿದ್ದಪಡಿಸಿದ ಅದ್ಭುತ ಡಿಸೈನ್ ಉಡುಗೆಯಲ್ಲಿ ಸುಧಾ ರೆಡ್ಡಿ ಮೆಟ್ ಗಾಲಾದಲ್ಲಿ ಪಾಲ್ಗೊಂಡಿದ್ದಾರೆ. ಫ್ಯಾಶನ್ ಪ್ರಿಯರು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಸುಧಾ ರೆಡ್ಡಿ, ಮೆಟ್ ಗಾಲಾದಲ್ಲಿ ಭಾಗವಹಿಸಿರುವ ಬಗ್ಗೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
PublicNext
14/09/2021 07:31 pm