ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊಬೈಲ್ ನುಂಗಿದ ಆಸಾಮಿ : ಸ್ಕ್ಯಾನ್ ನಲ್ಲಿ ಫೋನ್ ಪತ್ತೆ

ವಾಷಿಂಗ್ಟನ್ : ಕಾಯಿನ್,ಪಿನ್, ಹೀಗೆ ಬಂಗಾರದ ವಸ್ತುಗಳನ್ನು ನುಂಗುತ್ತಿರುವ ಸುದ್ದಿಗಳನ್ನು ಅಲ್ಲಲ್ಲಿ ಕೇಳಿದ್ದೇವೆ ಆದರೆ ಇಲ್ಲೋಬ್ಬ ಆಸಾಮಿ ಮೊಬೈಲ್ ಪೋನ್ ನುಂಗಿದ್ದು, ಆಪರೇಷನ್ ಮೂಲಕವಾಗಿ ಹೊರಗೆ ತೆಗೆದಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ. 33 ವರ್ಷದ ಫಿನ್ನಿಷ್ ಕಫನಿಯ ಮಾಜಿ ಊದ್ಯೋಗಿ ಫೋನ್ ನುಂಗಿದ್ದ ವ್ಯಕ್ತಿಯಾಗಿದ್ದಾನೆ. ಮೊಬೈಲ್ ನಾಲ್ಕು ದಿನಗಳಕಾಲ ವ್ಯಕ್ತಿಯ ಹೊಟ್ಟೆಯಲ್ಲಿ ಇತ್ತು. ಮೊಬೈಲ್ ಡೈಜೆಸ್ಟ್ ಆಗಿಲ್ಲ. ಹೀಗಾಗಿ ಆಪರೇಷನ್ ಮೂಲಕವಾಗಿ ಹೊರತಗೆ ತೆಗೆಯಲಾಗಿದೆ.

ಇನ್ನೂ ಮೂಬೈಲ್ ಬ್ಯಾಟರಿಯಲ್ಲಿರುವ ಕೊರ್ರೊಸಿವ್ ಆ್ಯಸಿಡ್ ಲೀಕ್ ಆಗುವ ಸಾಧ್ಯತೆ ಇತ್ತು. ಇದರಿಂದ ಪ್ರಾಣವೇ ಹೋಗುವ ಸಾಧ್ಯತೆ ಇತ್ತು ಎಂದು ವೈದ್ಯರು ಹೇಳಿದ್ದಾರೆ. ಹೊಟ್ಟೆಯೊಳಗೆ ಮೊಬೈಲ್ ಮೂರು ತುಂಡುಗಳಾಗಿರುವುದು ಸ್ಕ್ಯಾನ್ ನಲ್ಲಿ ಕಾಣಿಸಿಕೊಂಡಿತ್ತು. ನಂತರ ವೈದ್ಯರು ಆಪರೇಷನ್ ಪ್ರಾರಂಭಿಸಿದ್ದಾರೆ. ಇದೀಗ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತ ಯಾವ ಕಾರಣಕ್ಕಾಗಿ ಮೊಬೈಲ್ ನುಂಗಿದ್ದಾನೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.

Edited By : Nirmala Aralikatti
PublicNext

PublicNext

07/09/2021 12:09 pm

Cinque Terre

51.86 K

Cinque Terre

1