ಕಾಬೂಲ್: ತಾಲಿಬಾನಿಗಳು ತನ್ನ ಮೇಲೆ ನಿರ್ದಾಕ್ಷಿಣ್ಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆಫ್ಘಾನಿಸ್ತಾನದ ಮಹಿಳಾ ಕಾರ್ಯಕರ್ತೆಯೊಬ್ಬರು ಆರೋಪಿಸಿದ್ದಾರೆ.
ನರ್ಗಿಸ್ ಸದ್ದತ್ ಹಲ್ಲೆಗೆ ಒಳಗಾದ ಮಹಿಳಾ ಕಾರ್ಯಕರ್ತೆಯಾಗಿದ್ದಾರೆ. ರಾಜಕೀಯ ಹಕ್ಕುಗಳಿಗಾಗಿ ಕಾಬೂಲ್‌ನಲ್ಲಿ ಶನಿವಾರ ನಡೆದ ಪ್ರದರ್ಶನದಲ್ಲಿ ನರ್ಗಿಸ್ ಸದ್ದತ್ ಭಾಗವಹಿಸಿದ್ದರು. ಈ ಸಂಬಂಧ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕೆಯ ತಲೆಗೆ ಗಂಭೀರ ಗಾಯವಾಗಿ ಮುಖದ ಮೇಲೆ ರಕ್ತ ಸುರಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
PublicNext
04/09/2021 09:55 pm