ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕ ಸೇನೆ ಗುರಿಯಾಗಿಸಿಕೊಂಡು ಕಾಬೂಲ್ ನಲ್ಲಿ ಮತ್ತೊಂದು ದಾಳಿ : ಇಬ್ಬರ ಸಾವು

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಸದ್ಯ ನೈಜ ನಕರ ಕಾಣುತ್ತಿದೆ. ನೆತ್ತರ ಕೋಡಿ ಹರಿಯುತ್ತಿದೆ. ಜೀವ ಉಳಿಸಿಕೊಳ್ಳಲು ಜನ ಹರಸಾಹಸ ಮಾಡುತ್ತಿದ್ದಾರೆ. ಕಳೆದ 4 ದಿನದಲ್ಲಿ ಏರ್ಪೋರ್ಟ್ ಹೊರಗೆ 3 ಬಾರಿ ಸ್ಫೋಟ ನಡೆದಿದೆ. ಗುರುವಾರ ನಡೆದ ದಾಳಿಯಲ್ಲಿ 183 ಜನ ಮೃತಪಟ್ಟಿದ್ದರು. ಅಮೆರಿಕದ 13 ಯೋಧರು ಸೇರಿ 183 ಜನ ಮೃತಪಟ್ಟಿದ್ದರು.

ಇಂದು ಮತ್ತೊಂದು ರಾಕೆಟ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇಂದು ಸಂಜೆ ಕಾಬೂಲ್ ವಿಮಾನ ನಿಲ್ದಾಣದ ಪಶ್ಚಿಮ ರಿಹಾಯಶಿ ಇಲಾಖೆಯ ಖಾಜಾ-ಏ-ಬುಗಾರದಲ್ಲಿ ಈ ದಾಳಿ ನಡೆದಿದೆ. ಐಸಿಸ್-ಕೆ ಉಗ್ರ ಸಂಘಟನೆ ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಅಮೆರಿಕ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಮುಂದಾಗಿತ್ತು. ಆದ್ರೆ ಗುರಿ ತಪ್ಪಿದ ರಾಕೆಟ್ ಜನವಸತಿ ಪ್ರದೇಶದಲ್ಲಿ ಬಿದ್ದು ಸ್ಫೋಟಗೊಂಡಿದೆ. ಇದರಲ್ಲಿ ಯಾವುದೇ ಸೂಸೈಟ್ ಬಾಂಬರ್ ಗಳು ಇರಲಿಲ್ಲ ಎಂಬುದರ ಬಗ್ಗೆ ಖಚಿತ ಮಾಹಿತಿ ಪ್ರಕಟವಾಗಿಲ್ಲ.

ಕಾಬೂಲ್ ಸ್ಥಳೀಯ ಮಾಧ್ಯಮಗಳ ಪ್ರಕಾರ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಮಕ್ಕಳು ಮತ್ತು ಮಹಿಳೆಯರಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತ ಅಫ್ಘಾನ್ ಪೊಲೀಸರ ಪ್ರಕಾರ ರಾಕೆಟ್ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ ಎಂದು ಹೇಳಲಾಗುತ್ತಿದೆ.

ಐಎಸ್ ಕೆಪಿ ಉಗ್ರರು ಯಾವುದೇ ಕ್ಷಣದಲ್ಲಿ ಮತ್ತಷ್ಟು ದಾಳಿಗಳನ್ನು ನಡೆಸಬಹುದು ಎನ್ನಲಾಗಿದೆ. ಈ ದಾಳಿ ನಡುವೆಯೂ ಕಾಬೂಲ್ ಏರ್ ಪೋರ್ಟ್ ನಿಂದ ಜನರ ಏರ್ ಲಿಫ್ಟ್ ಮುಂದುವರಿದಿದೆ.

Edited By : Nirmala Aralikatti
PublicNext

PublicNext

29/08/2021 09:27 pm

Cinque Terre

129.31 K

Cinque Terre

2

ಸಂಬಂಧಿತ ಸುದ್ದಿ