ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ಖಾಸಗಿ ಅಂಗವನ್ನು ಚಾಕುವಿನಿಂದ ಕತ್ತರಿಸಿಕೊಂಡಿರುವ ಘಟನೆ ಬ್ರಿಟನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದಿದೆ. ಮಾನಸಿಕ ಅಸ್ವಸ್ಥ ಎನ್ನಲಾದ 34 ವರ್ಷದ ವ್ಯಕ್ತಿ ಖಾಸಗಿ ಅಂಗ ಕತ್ತರಿಸಿಕೊಂಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಆರೋಗ್ಯ ಸುಧಾರಿಸುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ದೇಹದ ಇನ್ನೂ ಕೆಲ ಕಡೆ ಗಾಯವಿದೆ. ವೈದ್ಯರು ಖಾಸಗಿ ಭಾಗವನ್ನು ಮರುಜೋಡನೆ ಮಾಡಿದ ವ್ಯದ್ಯರು ಇದು ಒಂದು ಪವಾಡವೇ ಸರಿ ಎಂದಿದ್ದಾರೆ.
ಈ ಶಸ್ತ್ರಚಿಕಿತ್ಸೆ ಬಗ್ಗೆ ಮಾತನಾಡಿದ ವೈದ್ಯರು ರೋಗಿ, ಖಾಸಗಿ ಭಾಗವನ್ನು ಬೇರ್ಪಡಿಸಿ ಸುಮಾರು 24 ಗಂಟೆಗಳಾಗಿತ್ತು. ಸುಮಾರು ಎರಡು ವಾರಗಳ ನಂತ್ರ ವ್ಯಕ್ತಿ ಮನೆಗೆ ತೆರಳಿದ್ದಾನೆ. ಖಾಸಗಿ ಭಾಗ ಬೇರ್ಪಟ್ಟು ಹಲವು ಗಂಟೆಗಳ ನಂತರವೂ, ಯಶಸ್ವಿಯಾಗಿ ಸೇರಿರುವುದು ಇದೇ ಮೊದಲ ಪ್ರಕರಣವೆಂದಿದ್ದಾರೆ. ವ್ಯಕ್ತಿ ಈಗ ಸಾಮಾನ್ಯ ಜೀವನ ನಡೆಸಬಹುದೆಂದು ವೈದ್ಯರು ಹೇಳಿದ್ದಾರೆ.
PublicNext
24/08/2021 04:39 pm