ಅಲಬಾಮ: ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳು ಅಮೆರಿಕದ ವಿದೇಶಾಂಗ ನೀತಿಯ 'ದೊಡ್ಡ ವೈಫಲ್ಯ' ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೂರಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಫ್ಘಾನಿಸ್ತಾನದಲ್ಲಿನ ಯುಎಸ್ ಸೇನಾ ನೆಲೆಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಮೆರಿಕ ಸೇನೆಯು 83 ಬಿಲಿಯನ್ ಡಾಲರ್ (6.17 ಲಕ್ಷ ಕೋಟಿ ರೂ.) ಮೊತ್ತದ ರಕ್ಷಣಾ ಉಪಕರಣಗಳನ್ನು ಬಿಟ್ಟು ಹೊರನಡೆಯುತ್ತಿದೆ. ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯು ಅಮೆರಿಕಕ್ಕೆ ಅತಿ ದೊಡ್ಡ ಮುಜುಗರ ತಂದಿದೆ. ಅಮೆರಿಕದ ಇತಿಹಾಸದಲ್ಲೇ ವಿದೇಶಾಂಗ ನೀತಿಗೆ ಉಂಟಾದ ದೊಡ್ಡ ಅವಮಾನ ಎಂದು ಹೇಳಿದ್ದಾರೆ.
ಸೇನೆಯನ್ನು ಹಿಂಪಡೆಯುತ್ತಿರುವುದು 'ಸಂಪೂರ್ಣ ಶರಣಾಗತಿ' ಮತ್ತು 'ದೇಶದ ನಾಯಕನ ಅಸಮರ್ಥತೆ'ಯಾಗಿದೆ. 'ಇದು ಸೇನೆಯ ಸಾರ್ವಕಾಲಿಕ ಸೋಲುಗಳಲ್ಲಿ ಒಂದಾಗಲಿದೆ' ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂದುವರಿದು, ತಾವು ಅಧಿಕಾರದಲ್ಲಿದ್ದಿದ್ದರೆ, ಇಂತಹ ಪ್ರಕರಣಗಳು ನಡೆಯುತ್ತಿರಲಿಲ್ಲ ಎಂದೂ ಹೇಳಿಕೊಂಡಿದ್ದಾರೆ.
PublicNext
22/08/2021 07:52 pm