ಕಾಬೂಲ್: ಸಾಮಾನ್ಯವಾಗಿ ಬಸ್, ಟೆಂಪೋ, ರೈಲಿನ ಮೇಲೆ ಕುಳಿತು ಜನರು ಪ್ರಯಾಣಿಸಿರುವುದನ್ನು ನೋಡಿದ್ದೇವೆ. ಆದರೆ ವಿಮಾನದ ರೆಕ್ಕೆ, ಟೈರ್, ಟಾಪ್ ಮೇಲೆ ಕುಳಿತು ಪ್ರಯಾಣಿಸಿದ್ದನ್ನು ಎಲ್ಲಿಯೂ ನೋಡಿಲ್ಲ ಹಾಗೂ ಕೇಳಿಲ್ಲ. ಆದರೆ ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸಕ್ಕೆ ಹೆದರಿದ ಜನರು ಪ್ರಾಣ ಉಳಿಸಿಕೊಳ್ಳಲು ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ.
ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಓಡಿ ಬಂದ ಸಾವಿರಾರು ಜನರು ಸಿಕ್ಕಸಿಕ್ಕ ವಿಮಾನಗಳಲ್ಲಿ ಹತ್ತಿ ಕುಳಿತು ದೇಶದಿಂದ ಪಲಾಯನಗೈಯಲು ಯತ್ನಿಸುತ್ತಿದ್ದಾರೆ. ವಿಮಾನ ನಿಲ್ದಾಣದ ಮೂಲಕ ಸಂಚರಿಸುತ್ತಿರುವ ದೃಶ್ಯಗಳು ಆ ದೇಶದಲ್ಲಿ ಪರಿಸ್ಥಿತಿ ಅದ್ಯಾವ ಮಟ್ಟಿಗೆ ಹದಗೆಟ್ಟಿದೆ ಅನ್ನುವುದಕ್ಕೆ ಕೈಗನ್ನಡಿ ಹಿಡಿದಂತಿದೆ. ಇದುವರೆಗೆ ಕಂಡು ಕೇಳರಿಯದ ರೀತಿಯ ಪಲಾಯನ ದೃಶ್ಯಗಳು ಮನಕಲಕುವಂತಿವೆ.
ವಿಮಾನವೊಂದರ ರೆಕ್ಕೆ ಮೇಲೆ ಜನಸಮೂಹವೇ ಕುಳಿತು ಪ್ರಯಾಣಿಸಿದ ವಿಡಿಯೋ ಇದಾಗಿದೆ. ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬ ಈ ವಿಡಿಯೋ ಮಾಡಿದ್ದು, ಸಾವಿರಾರು ಮಂದಿ ನಿಲ್ದಾಣದಲ್ಲೇ ಕಾಯುತ್ತ ನಿಂತಿದ್ದನ್ನು ಕಾಣಬಹುದಾಗಿದೆ.
PublicNext
18/08/2021 07:58 pm