ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ತಾಲಿಬಾನಿಗಳು ನನ್ನನ್ನು ಕೊಲ್ಲುತ್ತಾರೆ': ಅಫ್ಘಾನ್‌ನ ಮೊದಲ ಮಹಿಳಾ ಮೇಯರ್ ಆತಂಕ

ಕಾಬೂಲ್: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ ಎಂದು ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಜರಿಫಾ ಗಫಾರಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಹೌದು. ಮಾಧ್ಯಮ ಸಂದರ್ಶನವೊಂದರಲ್ಲಿ ಜರಿಫಾ ಗಫಾರಿ ತಮ್ಮ ಆತಂಕವನ್ನು ಹೇಳಿಕೊಂಡಿದ್ದಾರೆ. "ತಾಲಿಬಾನಿಗಳು ನಾನಿರುವಲ್ಲಿಗೆ ಬಂದು ನನ್ನನ್ನು ಕೊಲ್ಲುವುದನ್ನೇ ಎದುರು ನೋಡುತ್ತಿದ್ದೇನೆ. ಏಕೆಂದರೆ ಅವರ ಕಣ್ಣು ಮೊದಲು ಬೀಳುವುದೇ ನನ್ನಂಥವಳ ಮೇಲೆ. ತಾಲಿಬಾನಿಗಳ ರಾಜ್ಯದಲ್ಲಿ ಶಿಕ್ಷೆಗೆ ಒಳಗಾಗಲು ದೇಶದ್ರೋಹದ ಕೆಲಸವನ್ನೇ ಮಾಡಬೇಕೆಂದಿಲ್ಲ. ಇಲ್ಲಿ ಹೆಣ್ಣಾಗಿ ಹುಟ್ಟಿದರೆ ಸಾಕು. ನನ್ನನ್ನಾಗಲಿ ನನ್ನ ಕುಟುಂಬವನ್ನಾಗಲಿ ರಕ್ಷಣೆ ಮಾಡಲು ಯಾರೂ ಇಲ್ಲ. ನನ್ನ ಸಹಾಯಕ್ಕೆ ಯಾರೂ ಬಾರರು. ಅದು ನನಗೆ ಚೆನ್ನಾಗಿ ಗೊತ್ತಿದೆ. ಹಾಗೆಂದು ನಾನು ಓಡಿಹೋಗುವುದಿಲ್ಲ. ಒಂದು ವೇಳೆ ಓಡಿ ಹೋದರೂ ಎಲ್ಲಿಗೆ ಹೋಗಲಿ? ಎಲ್ಲೆಡೆ ಅವರೇ ತುಂಬಿಕೊಂಡಿರುವಾಗ ಎಲ್ಲಿ ಅವಿತುಕೊಳ್ಳಲಿ" ಎಂದು ಅಸಹಾಯಕತೆಯಿಂದ ಪ್ರಶ್ನಿಸಿದ್ದಾರೆ.

ನನ್ನ ಸೇನೆಯಲ್ಲಿ ಜನರಲ್ ಹುದ್ದೆಯ ಅಧಿಕಾರಿಯಾಗಿದ್ದವರನ್ನು ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು. ಇದುವರೆಗೂ ನನ್ನ ಮೇಲೆ ಮೂರು ಬಾರಿ ಕೊಲೆ ಯತ್ನಗಳು ನಡೆದಿವೆ. ಪ್ರಜಾಪ್ರಭುತ್ವ ಸರ್ಕಾರ ಇದ್ದ ಸಮಯದಲ್ಲೇ ತಾಲಿಬಾನಿಗಳು ಅವರ ಕಡೆಯವರಿದ್ದು, ನನ್ನನ್ನು ಕೊಲ್ಲಲು ಶತಪ್ರಯತ್ನ ನಡೆಸಿದ್ದರು ಎಂದರು.

ಜರಿಫಾ ಗಫಾರಿ ತನ್ನ 27ನೇ ವಯಸ್ಸಿನಲ್ಲಿ ಮೇಯರ್ ಹುದ್ದೆಗೇರಿ ಅಫ್ಘಾನಿಸ್ತಾನದ ಮೊದಲ ಮಹಿಳಾ ಮೇಯರ್ ಎನ್ನುವ ಖ್ಯಾತಿಗೆ ಪಾತ್ರರಾದವರು. 2018ರಲ್ಲಿ ಮೇಯರ್ ಗಾದಿಗೆ ಏರಿದ್ದ ಜರಿಫಾ ತನ್ನ ದೇಶದ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿದ್ದವರು.

Edited By : Vijay Kumar
PublicNext

PublicNext

17/08/2021 08:29 pm

Cinque Terre

31.4 K

Cinque Terre

2

ಸಂಬಂಧಿತ ಸುದ್ದಿ