ವಾಷಿಂಗ್ಟನ್: ಅಫ್ಗಾನಿಸ್ತಾನ ಸೇನೆಗೆ ಬೇಡದ ಯುದ್ಧದಲ್ಲಿ ಇನಷ್ಟು ಅಮೆರಿಕನ್ನರು ಬಲಿದಾನ ಆಗಲು ನಾನು ಬಿಡೋದಿಲ್ಲ.. ಬಿಡಬಾರದು ಕೂಡ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ
ಒಂದು ವರ್ಷ.. ಮತ್ತೊಂದು ವರ್ಷ ಅಥವಾ ಇನ್ನೂ 20 ವರ್ಷ ಇದ್ದರೂ ಸಹ ಅಫ್ಗಾನಿಸ್ತಾನದಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ.
ಹೀಗಾಗಿ ಅಫ್ಗಾನಿಸ್ತಾನದ ಸೇನೆಗೆ ಬೇಡದ ಯುದ್ಧದಲ್ಲಿ ಅಮೆರಿಕದ ಸೇನೆ ಭಾಗವಹಿಸುವುದಕ್ಕೆ ಯಾವುದೇ ಅರ್ಥವಿಲ್ಲ. ನಾನು ತೆಗೆದುಕೊಂಡಿರುವ ನಿರ್ಧಾರವನ್ನ ಎಲ್ಲರೂ ಟೀಕಿಸಬಹುದು. ನನ್ನ ವಿರುದ್ಧ ಕೇಳಿ ಬರುವ ಟೀಕೆಗಳನ್ನ ಸ್ವೀಕರಿಸಲು ನಾನು ಸಿದ್ಧನಿದ್ದೇನೆ. ನಾನು ತೆಗೆದುಕೊಂಡಿರುವ ನಿರ್ಧಾರದ ಅಮೆರಿಕದ ಜನ, ಸೇನಾ ಸಿಬ್ಬಂದಿ ಮತ್ತು ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿದೆ.
ಅಮೆರಿಕನ್ನರು, ಅಮೆರಿಕ ಸೇನೆ, ಅಮೆರಿಕದ ಹಿತಾಸಕ್ತಿಗೆ ಅನುಗುಣವಾಗಿ ತಾನು ನಿರ್ಧಾರ ತೆಗೆದುಕೊಂಡಿದ್ದೇನೆ ಅಂತಾ ಹೇಳಿರೋ ಜೊ ಬೈಡನ್, ತಮ್ಮ ನಿರ್ಧಾರದಿಂದ ಹಿಂದೆ ಸರಿಯಲ್ಲ ಅಂತಾ ಖಡಕ್ ಆಗಿ ಹೇಳಿದ್ದಾರೆ. ಇದುವರೆಗೆ ನನ್ನನ್ನು ಸೇರಿ ನಾಲ್ಕು ಜನ ಅಮೆರಿಕದ ಅಧ್ಯಕ್ಷರು ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ವಿರುದ್ಧ ಯುದ್ಧ ನಿಲ್ಲಿಸುವ ಕುರಿತು ಚಿಂತಿಸಿದ್ದೇವೆ. ಇದು ನನ್ನ ಅಧ್ಯಕ್ಷ ಅವಧಿಯಲ್ಲಿ ಕೊನೆಗೊಳ್ಳಲಿ. ಯುದ್ಧ ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳಲು ಐದನೇ ಅಧ್ಯಕ್ಷರು ಬರೋದು ಬೇಡ ಅಂತಾ ಹೇಳಿ ತಮ್ಮ ನಿಲುವನ್ನ ಸಮರ್ಥಿಸಿಕೊಂಡಿದ್ದಾರೆ.
PublicNext
17/08/2021 08:37 am