ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಫ್ಘಾನ್ ನಲ್ಲಿ ತಾಲಿಬಾನಿಗಳ ದರ್ಬಾರ್ : ಇವರೆ ನೋಡಿ ತಾಲಿಬಾನ್ ಸೂತ್ರದಾರರು

ಕಾಬೂಲ್ : 1994ರ ಸೆಪ್ಟಂಬರ್ ನಲ್ಲಿ ತಾಲಿಬಾನ್ ಎನ್ನುವ ಸಂಘಟನೆ ಉದಯವಾಯಿತು. 90ರ ದಶಕದ ಆರಂಭದಲ್ಲಿ ರಷ್ಯಾ ಸೇನೆ, ಅಫ್ಘಾನಿಸ್ತಾನವನ್ನು ತೊರೆಯಿತು. ಅಲ್ಲಿಂದ 2001ರವರೆಗೆ ತಾಲಿಬಾನಿಗಳ ಹಿಡಿತದಲ್ಲಿ ಕಂದಹಾರ್ ಸೇರಿದಂತೆ ಅಫ್ಘಾನಿಸ್ತಾನದ ಅನೇಕ ಪ್ರದೇಶಗಳಿದ್ದವು.

ಅಫ್ಘಾನ್ ನ ಲ್ಲಿ ಅಹ್ಮದ್ ಶಾ ಹಾಗೂ ಅಬ್ದುಲ್ ರಶೀದ್ ಎಂಬ ನಾಯಕರು ಸಮ್ಮಿಶ್ರ ಸರ್ಕಾರ ರಚಿಸಿದರಾದರೂ ತಾಲಿಬಾನಿಗಳ ಪ್ರದೇಶಗಳು ಸರ್ಕಾರದ ಹಿಡಿತದಿಂದ ಹೊರಗಿದ್ದವು. 2000ರ ಹೊತ್ತಿಗೆ, ಅಫ್ಘಾನಿಸ್ತಾನದ ಕೇವಲ ಶೇ. 10ರಷ್ಟು ಭಾಗ ಮಾತ್ರ ಸರ್ಕಾರದ ಆಡಳಿತ ಕ್ಕೊಳಪಟ್ಟಿದ್ದು, ಶೇ. 90ರಷ್ಟು ಭಾಗದಲ್ಲಿ ತಾಲಿಬಾನಿಗಳ ಆಡಳಿತವಿತ್ತು.

ತಾಲಿಬಾನ್ ಸೂತ್ರದಾರರು ಯಾರು?

ಅಮಿರ್ ಅಲ್-ಮುಮಿನಿನ್ (ಪರಮೋಚ್ಛ ನಾಯಕ): ಈತ ತಾಲಿಬಾನ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ 2016ರಿಂದ ತಾಲಿಬಾನಿಗಳ ನಾಯಕ. ರಾಜಕೀಯ, ಧಾರ್ಮಿಕ, ಉಗ್ರ ಚಟುವಟಿಕೆಗಳಲ್ಲಿ ಈತನ ನಿರ್ಧಾರವೇ ಅಂತಿಮ

ಮುಲ್ಲಾ ಅಬ್ದುಲ್ ಹಕೀಂ (ಹಿರಿಯ ನ್ಯಾಯಮೂರ್ತಿ): ತಾಲಿಬಾನ್ನ ನ್ಯಾಯಾಂಗ ವ್ಯವಸ್ಥೆಯ ಮೇಲ್ವಿಚಾರಕ; ದೋಹಾದಲ್ಲಿರುವ ಸಂಧಾನ ಸಮಿತಿಯ ಮುಖ್ಯಸ್ಥ

ಮುಲ್ಲಾ ಅಬ್ದುಲ್ ಘನಿ ಬರಾದರ್ (1ನೇ ಉಪ ನಾಯಕ): ತಾಲಿಬಾನ್ನ ಸಹ-ಸಂಸ್ಥಾಪಕ, ದೋಹಾದಲ್ಲಿರುವ ತಾಲಿಬಾನ್ ರಾಜಕೀಯ ಕಚೇರಿಯ ಮುಖ್ಯಸ್ಥ

ಮುಲ್ಲಾ ಮೊಹಮ್ಮದ್ ಯಾಕೂಬ್ (2ನೇ ಉಪನಾಯಕ): ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ನ ಪುತ್ರ. ತಾಲಿಬಾನ್ನ ಸೇನಾ ವಿಭಾಗದ ಮುಖ್ಯಸ್ಥ

ರಹ್ಬಾರಿ ಶುರಾ (ಲೀಡರ್ಶಿಪ್ಕೌನ್ಸಿಲ್): ಇದು ತಾಲಿಬಾನ್ ಸಂಘಟನೆಯಲ್ಲಿ ಪರಮೋಚ್ಚ ಸಮಿತಿ. ಸಂಘಟನೆಗೆ ಪೂರಕವಾದ ನಿರ್ಧಾರಗಳನ್ನು ಇದುಕೈಗೊಳ್ಳುತ್ತದೆಹಾಗೂ ಅಗತ್ಯವಿದ್ದಾಗ ನಾಯಕರಿಗೆ ಸಲಹೆಗಳನ್ನು ನೀಡುತ್ತದೆ. ಇದರಲ್ಲಿ 26ಜನ ಸದಸ್ಯರಿದ್ದಾರೆ.

ದೋಹಾದಲ್ಲಿದೆ ರಾಜಕೀಯ ಕಚೇರಿಯಿದೆ. ಇಲ್ಲಿ ಯಾವುದೇ ಕಾರ್ಯನಿರ್ವಹಣೆ ಅಥವಾ ಶಾಂತಿ ಸಂಧಾನಗಳಿಗೆ ಸಂಭವಿಸಿದ ಮಾತುಕತೆಗಳು ಇದೇ ಕಚೇರಿಯಲ್ಲೇ ನಡೆಯುತ್ತದೆ.

Edited By : Nirmala Aralikatti
PublicNext

PublicNext

16/08/2021 05:59 pm

Cinque Terre

47.49 K

Cinque Terre

8

ಸಂಬಂಧಿತ ಸುದ್ದಿ