ಕಾಬೂಲ್ : ಅಫ್ಘಾನಿಸ್ತಾನ ದೇಶವನ್ನು ತಾಲಿಬಾನ್ ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಇಪ್ಪತ್ತು ವರ್ಷಗಳ ಬಳಿಕ ಅಧಿಕಾರಕ್ಕೆ ಮರಳಿದೆ. ಆಫ್ಘಾನಿಸ್ತಾನ ಸಂಪೂರ್ಣ ತಾಲಿಬಾನ್ ಉಗ್ರರ ಕೈವಶವಾಗಿದೆ. ಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಉಗ್ರರಿಗೆ ಶರಣಾಗಿದ್ದಾರೆ. ಇದೀಗ ತಾಲಿಬಾನ್ ಉಗ್ರರು ಮದ್ಯಂತ್ರ ಅಧ್ಯಕ್ಷನಾಗಿ ಅಹಮ್ಮದ್ ಜಲಾಲಿಗೆ ಪಟ್ಟ ಕಟ್ಟಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ರಾಜಧಾನಿ ಕಾಬೂಲ್ ಕೂಡ ಉಗ್ರರ ಕೈವಶವಾಗಿದೆ.
ಇನ್ನು ಆಫ್ಘಾನನ್ನು ತಮ್ಮ ಸುಪರ್ಧಿಗೆ ಪಡೆದ ತಾಲಿಬಾನ್ ಸರ್ಕಾರಿ ಕಚೇರಿಗಳ ಉಸ್ತವಾರಿ ವಹಿಸಿದ್ದಾರೆ. ಇನ್ನು ಉಗ್ರರಿಂದ ಜೀವ ಉಳಿಸಿಕೊಳ್ಳಲು ಆಫ್ಘಾನರು ಹರಸಾಹಸಪಡುತ್ತಿರುವುದು ದೇಶದಲ್ಲಿ ಸಾಮಾನ್ಯವಾಗಿದೆ.
ಸದ್ಯ ಅಫ್ಘಾನಿಸ್ತಾನ ಅಧ್ಯಕ್ಷರ ಭವನ, ಸಂಸತ್ತುಗಳಲ್ಲೆಲ್ಲ ತಾಲಿಬಾನ್ ಉಗ್ರರದ್ದೇ ಕಾರುಬಾರು. ಕೈಯಲ್ಲಿ ಬಂದೂಕಿನಿಂತಹ ಶಸ್ತ್ರಾಸ್ತ್ರ ಹಿಡಿದ ಉಗ್ರರು ಅಧ್ಯಕ್ಷರ ಭವನ, ಸಂಸತ್ತಿನ ಆಸನಗಳಲ್ಲಿ ಕುಳಿತಿರುವ ಫೋಟೋ-ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿವೆ.
PublicNext
16/08/2021 04:37 pm