ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಯನ್ಮಾರ್‌ ನಾಯಕಿ ಆಂಗ್ ಸಾನ್ ಸೂಕಿ ಬಂಧನ- ಸೇನೆ ಕೈಗೆ ಸೇರಿದ ಅಧಿಕಾರ

ನಾಯ್ಪಿಟಾವ್: ಮಯನ್ಮಾರ್​ನ ಮಿಲಿಟರಿ ಪಡೆ ಅಲ್ಲಿನ ಆಡಳಿತ ಪಕ್ಷದ ನಾಯಕಿ ಅಂಗ್ ಸಾನ್ ಸೂಕಿ ಮತ್ತು ರಾಷ್ಟ್ರದ ಅಧ್ಯಕ್ಷರನ್ನು ಬಂಧಿಸಿದೆ ಎಂದು ಸೂಕಿ ಪಕ್ಷದ ವಕ್ತಾರ ಸೋಮವಾರ ಹೇಳಿದ್ದಾರೆ. ಇದರಿಂದಾಗಿ ದೇಶದಲ್ಲಿ ಒಂದು ವರ್ಷ ರಾಜ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಮಿಲಿಟರಿ ಒಡೆತನದ ಮೈವಾಡಿ ಟಿವಿಯಲ್ಲಿ ಸೋಮವಾರ ಬೆಳಿಗ್ಗೆ ಈ ಘೋಷಣೆ ಮಾಡಲಾಗಿದೆ. ಸ್ಟೇಟ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ಅವರನ್ನು ಗೃಹ ಬಂಧನದಲ್ಲಿಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇತ್ತ ''ದೇಶದ ರಾಜಧಾನಿ ನಾಯ್ಪಿಟಾವ್‌ನ ಫೋನ್ ಮತ್ತು ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿರುವುದರಿಂದ ಆಂಗ್ ಸಾನ್ ಸೂಕಿ ಅವರನ್ನು ಸಂಪರ್ಕಿಸಲಾಗುತ್ತಿಲ್ಲ'' ಎಂದು ಅವರ ಪಕ್ಷವಾದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಾರ್ಟಿ ಹೇಳಿದೆ.

Edited By : Vijay Kumar
PublicNext

PublicNext

01/02/2021 11:20 am

Cinque Terre

37.68 K

Cinque Terre

2

ಸಂಬಂಧಿತ ಸುದ್ದಿ