ವಾಷಿಂಗ್ಟನ್: 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅವರು ಪ್ರಮಾಣ ವಚನ ಸ್ವೀಕರಿಸಿ ದೇಶವನ್ನುದ್ದೇಶಿಸಿ ಮಾಡಲಿರುವ ಭಾಷಣವನ್ನು ಆಲಿಸಲು ಅಮೆರಿಕದವರು ಮಾತ್ರವಲ್ಲದೇ, ಹಲವಾರು ದೇಶಗಳ ಜನರು ಕಾತರರಾಗಿ ಕಾಯುತ್ತಿದ್ದಾರೆ.
ಹೆಮ್ಮೆಯ ಸಂಗತಿ ಅಂದ್ರೆ ಜೋ ಬೈಡೆನ್ ಅವರ ಈ ಅಧ್ಯಕ್ಷೀಯ ಭಾಷಣವನ್ನು ಬರೆದುಕೊಟ್ಟವರು ಭಾರತ ಮೂಲದ ವಿನಯ್ ರೆಡ್ಡಿ!
ಹೌದು. ಭಾರತೀಯನಿಗೆ ಈ ಅವಕಾಶ ಸಿಕ್ಕಿದೆ. ಜೋ ಬೈಡೆನ್ ಅವರಿಗೆ ಭಾರತೀಯರ ಮೇಲೆ ಅದೇನೋ ವ್ಯಾಮೋಹ. ಇದೇ ಕಾರಣಕ್ಕೆ ಅಮೆರಿಕದ ಸರ್ಜನ್ ಜನರಲ್ ಹುದ್ದೆಯಿಂದ ಹಿಡಿದು, ಭದ್ರತಾ ಮಂಡಳಿವರೆಗೂ ಭಾರತೀಯ ಮೂಲದವರನ್ನು ಜೋ ಬೈಡನ್ ತಮ್ಮ ಸಂಪುಟದಲ್ಲಿರಿಸಿಕೊಂಡಿದ್ದಾರೆ.
ಭಾರತೀಯ ಕಾಲಮಾನದಲ್ಲಿ ಇಂದು ರಾತ್ರಿ 10 ಗಂಟೆಗೆ ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಹಾಗೂ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಲಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಕ್ಯಾಪಿಟಲ್ ಹಿಲ್ಸ್ ನಲ್ಲಿ ಜೋ ಬೈಡನ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ಇನ್ನು ಒಹಾಯೋದ ಡೇಟನ್ ನಲ್ಲಿ ಬೆಳೆದಿರುವ ವಿನಯ್ ರೆಡ್ಡಿ ಅವರು 2013 ರಿಂದ 2017ರ ಅವಧಿಯಲ್ಲಿ ಬೈಡೆನ್ ಉಪಾಧ್ಯಕ್ಷರಾಗಿದ್ದಲೂ ಭಾಷಣ ಬರೆದುಕೊಟ್ಟಿದ್ದರು, ಚುನಾವಣಾ ಪ್ರಚಾರದ ಸಂದರ್ಭದಲ್ಲೂ ವಿನಯ್ ಅವರ ಭಾಷಣ ಸಿದ್ಧಪಡಿಸಿದ್ದರು.
ಅಧ್ಯಕ್ಷರ ಭಾಷಣ ಬರೆದುಕೊಡುವ ಹುದ್ದೆಗೇರಿದ ಮೊದಲ ಭಾರತೀಯ ಮೂಲದ ಅಮೆರಿಕನ್ ಎನಿಸಿಕೊಂಡಿದ್ದಾರೆ ವಿನಯ್.
PublicNext
20/01/2021 04:50 pm