ವಾಷಿಂಗ್ಟನ್ : ಅಹಿಂಸೆ, ಗಲಭೆ, ಅಶ್ಲೀಲ ಮತ್ತಿತ್ಯಾದಿ ಕೆಲ ಸೂಕ್ಷ್ಮ ವಿಚಾರಗಳನ್ನು ಪ್ರಚೋದಿಸುವ ಪೋಸ್ಟ್ ಗಳನ್ನು ಟ್ವಿಟ್ಟರ್ ಸಹಿಸುವುದಿಲ್ಲ.
ಹೀಗಾಗಿ, ಅಂಥ ಪೋಸ್ಟ್ ಗಳಿದ್ದರೆ ಅದನ್ನು ಟ್ವಿಟ್ಟರ್ ಡಿಲೀಟ್ ಮಾಡುತ್ತದೆ. ಅದು ಮಿತಿ ಮೀರಿದರೆ, ಟ್ವಿಟ್ಟರ್ ಖಾತೆಯನ್ನೇ ರದ್ದು ಮಾಡುತ್ತದೆ.
ಈಗ ಟ್ರಂಪ್ ವಿಚಾರದಲ್ಲೂ ಇದೇ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ಟ್ರಂಪ್ ಟ್ವೀಟ್ ಪ್ರಚೋದನೆ ನೀಡಿತ್ತು. ಹೀಗಾಗಿ, ಅವರ ಅಧಿಕೃತ ಖಾತೆಯನ್ನೇ ಡಿಲೀಟ್ ಮಾಡಿದೆ.
ಈ ನಿರ್ಧಾರ ತೆಗೆದುಕೊಂಡಿದ್ದು ಭಾರತ ಮೂಲದ ಅಮೆರಿಕ ನಿವಾಸಿ ವಿಜಯಾ ಗಡ್ಡೆ.
ಇವರು ಟ್ವಿಟರ್ ನ ಕಾನೂನು, ನೀತಿ ಮತ್ತು ಸುರಕ್ಷತೆ ವಿಭಾಗವನ್ನು ಮುನ್ನಡೆಸುತ್ತಿದ್ದಾರೆ. ವಿಜಯಾ ನೇತೃತ್ವದಲ್ಲಿ ನಡೆದ ಸಭೆ ವೇಳೆ ಟ್ರಂಪ್ ಖಾತೆಯನ್ನು ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯಾ, ಹಿಂಸಾಚಾರ ಹೆಚ್ಚುವ ಭೀತಿ ಎದುರಾದ್ದರಿಂದ @realDonaldTrump ಖಾತೆಯನ್ನು ರದ್ದು ಮಾಡುವುದು ಟ್ವಿಟ್ಟರ್ ಗೆ ಅನಿವಾರ್ಯವಾಯಿತು ಎಂದಿದ್ದಾರೆ.
ಟ್ವಿಟ್ಟರ್ ಸಂಸ್ಥೆ ಸಭೆ ನಡೆಸಿ, ಸರ್ವಾನುಮತದಿಂದ ನಿರ್ಣಯ ತೆಗೆದುಕೊಂಡಿತು. ಅದಕ್ಕೆ ಅಗತ್ಯವಿರುವ ಕಾನೂನುಗಳನ್ನು ಸಭೆಗೆ ಮನದಟ್ಟುಪಡಿಸಲಾಯಿತು ಎಂದು ವಿಜಯಾ ವಿವರಿಸಿದ್ದಾರೆ.
ವಿಜಯಾ ಹುಟ್ಟಿದ್ದು ಹೈದರಾಬಾದಿನಲ್ಲಿ. ಚಿಕ್ಕವರಿದ್ದಾಗಲೇ ಅವರು ಅಮೆರಿಕದ ಟೆಕ್ಸಾಸ್ ನಗರಕ್ಕೆ ವಲಸೆ ಹೋಗಿದ್ದರು.
PublicNext
11/01/2021 03:48 pm