ವಾಷಿಂಗ್ಟನ್: ಅಮೆರಿಕದಲ್ಲಿ ಅಧ್ಯಕ್ಷಿಯರ ಚುನಾವಣೆಯ ಬಳಿಕ ದೇಶದಲ್ಲಿ ನಡೆಯಬಾರದ್ದೇಲ್ಲ ನಡೆದುಹೋಗಿದೆ.
ಈ ನಡುವಿನ ಅಧಿಯಲ್ಲಿ ನಡೆದ ಅಲೋಲ ಕಲೋಲಗಳಿಂದಾಗಿ ಇದು ಅಮೆರಿಕದ ಕರಾಳ ದಿನವೆಂದು ಹೇಳಲಾಗಿದೆ.
ಮಾಜಿ ಅಧ್ಯಕ್ಷರ ಟ್ರಂಪ್ ಅನುಯಾಯಿಗಳು ದೇಶದಲ್ಲಿ ನಡೆಸಿದ ಹಿಂಸಾಚಾರವನ್ನು ಯಾರು ಮರೆಯುವಂತಿಲ್ಲ.
ಈ ದಾಂಧಲೆಗೆ ಟ್ರಂಪ್ ಅವರ ಟ್ವೀಟ್ ಗಳು ಪುಷ್ಠಿನೀಡುವಂತಿರುವ ಕಾರಣ ಟ್ವೀಟ್ ಕಂಪನಿ ಟ್ರಂಪ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಗಲಾಟೆ,ಗದ್ದಲಕ್ಕೆ ಪುಷ್ಠಿನೀಡುವಂತಹ ಪೋಸ್ಟ್ ಡಿಲಿಟ್ ಮಾಡದಿದ್ದರೆ ಖಾತೆಯನ್ನು ಶಾಶ್ವತ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆಯನ್ನು ನೀಡಿತ್ತು.
ಸದ್ಯ ಅಧಿಕಾರದ ಕೇಂದ್ರ ಸ್ಥಾನವೂ ಆದ 'ಯು.ಎಸ್.ಕ್ಯಾಪಿಟಲ್'ನಲ್ಲಿ ಬುಧವಾರ ನಡೆದ ದಾಂದಲೆಗೆ ಮತ್ತಷ್ಟು ಪ್ರಚೋದನೆ ನೀಡುವ ಅಪಾಯವಿದೆ ಎಂದು ಪರಿಗಣಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಟ್ವಿಟರ್ ತಿಳಿಸಿದೆ.
ಟ್ರಂಪ್ ಬೆಂಬಲಿಗರು ಹಿಂಸಾಚಾರ ನಡೆಸಿದ ಬಳಿಕ (ಬುಧವಾರ) ಟ್ರಂಪ್ ಖಾತೆಯನ್ನು 12 ತಾಸು ಅಮಾನತಿನಲ್ಲಿಡಲಾಗಿತ್ತು.
'ಡೊನಾಲ್ಡ್ ಟ್ರಂಪ್ ಅವರ ಖಾತೆಯಿಂದ ಇತ್ತೀಚೆಗೆ ಮಾಡಲಾದ ಟ್ವೀಟ್ಗಳನ್ನು ಮತ್ತು ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಬಳಿಕ ಗಲಭೆಗೆ ಮತ್ತಷ್ಟು ಪ್ರಚೋಧನೆ ನೀಡುವ ಅಪಾಯವಿದೆ ಎಂದು ಪರಿಗಣಿಸಿ ಅವರ ಖಾತೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸಲಾಗಿದೆ' ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.
ಹಿಂಸಾಚಾರದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ಟ್ರಂಪ್ ಅವರ ಖಾತೆಗಳನ್ನು ನಿಯಂತ್ರಿಸಿವೆ. ಟ್ರಂಪ್ ಅಧ್ಯಕ್ಷೀಯ ಅಧಿಕಾರ ಅವಧಿ ಮುಗಿಯುವವರೆಗೆ ಅವರ ಖಾತೆಯನ್ನು ಅಮಾನತುಗೊಳಿಸುವುದಾಗಿ ಫೇಸ್ಬುಕ್ ಈ ವಾರದ ಆರಂಭದಲ್ಲಿಯೇ ತಿಳಿಸಿತ್ತು.
ಡೆಮಾಕ್ರಟಿಕ್ ಪಕ್ಷದಿಂದ ಚುನಾಯಿತರಾಗಿರುವ ಜೋ ಬೈಡನ್ ಅವರು ಜನವರಿ 20ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
PublicNext
09/01/2021 07:51 am